ಸುರಪುರ: ಇದೊಂದು ಉತ್ತಮ ಸುವರ್ಣಾವಕಾಶ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಎಲ್ಲಾ ಸಹೋದರ ಸಹೋದರಿಯರು ಬಳಸಿಕೊಳ್ಳಬೇಕು. ಸಾವಿರಾರು ರೂಪಾಯಿ ಖರ್ಚು ಮಾಡಿ ದೂರದ ಊರಿಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವ ಯುವ ಸಮುದಾಯಕ್ಕೆ ಒಳ್ಳೆಯ ಅವಕಾಶ ಒದಗಿ ಬಂದಿದೆ.
ಸಗರ ನಾಡು ಸುರಪುರ ಹುಣಸಗಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ ಅಣ್ಣಾಜೀ ಅವರ ದೂರದೃಷ್ಟಿ ಮತ್ತು ತೀರಾ ಹಿಂದುಳಿದ ಪ್ರದೇಶದ ವಿಧ್ಯಾರ್ಥಿಗಳಿಗೆ ಸಹಾಯ ಆಗಲಿ ಎನ್ನುವ ಉದ್ದೇಶದಿಂದ ತಮ್ಮ ತಾಯಿಯಾದ ದಿವಂಗತ ಶ್ರೀ ತಿಮ್ಮಮ್ಮ ಗೌಡ್ತಿ ಮೆಮೋರಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕೋಡೆಕಲ್ (ರಿ) ಇವರ ವತಿಯಿಂದ ಸಾಧನಾ IAS ಕೋಚಿಂಗ್ ಸೆಂಟರ್ ವಿಜಯನಗರ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿಧ್ಯಾರ್ಥಿಗಳಿಗೆ ಹುಣಸಗಿಯ ನೀಲಕಂಠರಾಯ ಕಲ್ಯಾಣ ಮಂಟಪದಲ್ಲಿ ” ಸಾಧನಾ IAS ಕೋಚಿಂಗ್ ಸೆಂಟರ್ ವ್ಯವಸ್ಥೆ ಮಾಡಿದ್ದಾರೆ.
ಮಾನ್ಯ ಶಾಸಕರಾದ ಶ್ರೀ ನರಸಿಂಹ ನಾಯಕ ರಾಜುಗೌಡ ಅಣ್ಣಾಜೀ ಅವರಿಗೆ ಮತ್ತು ಈ ಒಂದು ಒಳ್ಳೆಯ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.