ರಾಯಚೂರು: ದಿನಾಂಕ 2/2/22 ರಂದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬಿಜ್ರ್ ನಲ್ಲಿ ಪರಮ ಪೂಜ್ಯ ವರದಾನೇಶ್ವರ ಮಾಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ತುರ್ತು ಸಭೆ ಕರೆಯಲಾಗಿದೆ.
ಬೇಡ ವಾಲ್ಮೀಕಿ ನಾಯಕ ಸಮಾಜದ ಅನೇಕ ಜಲ್ವಂತ ಸಮಸ್ಯಗಳ ಕುರಿತು ಚಿಂತನ ಮಂಥನ ಸಭೆ ಕರೆಯಲಾಗಿದೆ. ಅದಕ್ಕಾಗಿ ಈ ಸಭೆಗೆ ಸಮಾಜದ ಪ್ರಮುಖ ಮಾನ್ಯ ಮುಂಖಡರಗಳು ಮಾನ್ಯ ವಿವಿಧ ಸಂಘಟನೆಗಳ ಜಿಲ್ಲಾ ಅಧ್ಯಕ್ಷರಗಳು ಪದಧಾರಿಕಾರಿಗಳು ಮಾನ್ಯ ತಾಲೂಕು ಅಧ್ಯಕ್ಷರಗಳು ಪದಧಾರಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಪುರಸಭೆ ನಗರಸಭೆ ಪಟ್ಟಣ ಪಂಚಾಯತ್ ಸದಸ್ಯರಗಳು ಮಾನ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಗಳು ಮಾನ್ಯ ಸದಸ್ಯರುಗಳು ಹಾಗೂ ಹಾಗೂ ಮಾನ್ಯ ಸಮಾಜದ ಪತ್ರಕರ್ತರು ಮಾನ್ಯ ವಕೀಲರಗಳು ಮಾನ್ಯ ಸಮಾಜ ಹಿತ ಚಿಂತಕರು ಯುವಕರು ಸಮಾನ ಮನಸ್ಕಾರರಾಗಿ ಸೇವಾ ಮನೋಭಾವನೆಯಿಂದ ಆಗಮಿಸಬೆಕಾಗಿದೆ.
ಸಮಾಜದ ಶ್ರಯೋಭಿದಿಗಾಗಿ ಸಮಾಜದ ಅಳಿವು ಉಳಿವಿಗಾಗಿ ಪಕ್ಷ ಬೇದ ಮರೆತು ಸಮಾಜ ಕೆಲಸ ಮಾಡಬೇಕಾಗಿದೆ. ಏನೆ ಕೆಲಸಗಳು ಇದ್ದರು ಕೂಡ ಈಗ ಸಮಾಜಕ್ಕೆ ಗಂಡಾಂತರ ಬಂದಿರುವ ಪ್ರಯುಕ್ತ ಅದನ್ನು ಹೇಗೆ ತಡೆಗಟ್ಟುವ ಕುರಿತು ತುರ್ತು ಸಭೆ ಇದೆ.
ಈ ವಿಷಯಗಳ ಕುರಿತು ಚರ್ಚೆ ಮಾಡಲಾಗುವುದು
1 ಘನ ಸರ್ಕಾರ ತಳವಾರ ಸರ್ಟಿಫಿಕೇಟ್ ಜಾರಿ ಮಾಡಿರುವ ಕುರಿತು
2 ಸುಳ್ಳು ಜಾತಿ ಬಗ್ಗೆ
3 ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಘಟನೆ
ಗಟ್ಟಿಗೊಳಿಸುವ ಬಗ್ಗೆ
7,5 ಮೀಸಲಾತಿ ಬಗ್ಗೆ
ಐತಿಹಾಸಿಕ ಸ್ಥಳವಾದ ತಿಂಥಣಿ ಬ್ರಿಜ್ ನಲ್ಲಿ ವಾಲ್ಮೀಕಿ ವೃತವನ್ನಃ ಪುನಶ್ಚೇತನ ಗೊಳಿಸಿವ ಬಗ್ಗೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಖ ಮಠವು ಸ್ಥಾಪಿಸುವ ಕುರಿತು ಇನ್ನೂ ಅನೇಕ ಸಮಸ್ಯೆಗಳು ಕುರಿತ ಬೆಳಿಗ್ಗೆ 11ಗಂಟೆ ಸುದಿರ್ಘವಾಗಿ ಚರ್ಚಿಸಿ
ನಂತರ ಸಾಕೇಂತಿಕವಾಗಿ ಧರಣೆಯನ್ನು ಮಾಡುವುದರ ಮೂಲಕ ಮಾನ್ಯ ತಹಶೀಲ್ದಾರರಿಗೆ 3 ಗಂಟೆಗೆ ಸರಕಾರದ ಆದೇಶವನ್ನು ರದ್ದು ಗೊಳಿಸುವ ಕುರಿತು ಮನವಿ ಪತ್ರವನ್ನು ಕೊಡಲಾಗುವುದು. ಅದಕ್ಕಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಮಾಜದ ಪರವಾಗಿ ಕೊರಲಾಗಿದೆ.