ತಲೆ ಕೂದಲ ದಪ್ಪವಾಗಿ, ಉದ್ದವಾಗಿ ಬೆಳೆಯಬೇಕು ಎಂಬುದು ಮಹಿಳೆಯರ ಆಸೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ (Hair Care) ಹೆಚ್ಚು ಕಾಡುತ್ತಿದೆ. ಕೆಲವು ರಾಸಾಯನಿಕಗಳ ಬಳಕೆ, ಕೂದಲಿನ ಬಗ್ಗೆ ಕಾಳಜಿ ಇಲ್ಲದಿರುವುದರಿಂದ ಹೆಚ್ಚಾಗಿ ನೆತ್ತಿಯ ಭಾಗದಲ್ಲಿ ಕೂದಲು ಉದುರುತ್ತವೆ. ಹೀಗಿರುವಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇ ಬೇಕು. ಸಣ್ಣ ಸಮಸ್ಯೆ ಮುಂದೊಂದು ದಿನ ದೊಡ್ಡದಾಗುವ ಸಾಧ್ಯತೆಗಳಿರುತ್ತವೆ.
ತಲೆ ಕೂದಲು ದಪ್ಪವಾಗಿದ್ದರೆ ನೋಡಲು ಸುಂದರವಾಗಿ ಕಾಣಿಸಬಹುದು ಎಂಬುದು ಕೆಲವರ ಆಸೆ. ಇನ್ನು ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರು ಸಮಸ್ಯೆ ಕಾಡುತ್ತಿದೆ ಎಂಬ ಆತಂಕ. ಈ ಕುರಿತಾಗಿ ಚಿಂತಿಸಿಯೇ ಅರ್ಥ ತಲೆ ಕೂದಲು ಉದುರಿ ಹೋಗುತ್ತಿರಬಹುದು. ಚಿಂತೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಪರಿಹಾರ ಕ್ರಮಗಳು ಏನಿವೆ? ಎಂಬುದರ ಬಗ್ಗೆ ತಿಳಿದುಕೊಳ್ಳಿ. ದಪ್ಪವಾದ ಸುಂದರ ಉದ್ದ ತಲೆಕೂದಲನ್ನು ಪಡೆಯಲು ಒಂದಿಷ್ಟು ಮನೆಮದ್ದುಗಳು ಇಲ್ಲಿವೆ.
ಧೂಳು, ಆಲ್ಕೋಹಾಲ್, ಧೂಮಪಾನ, ಆಹಾರ ವ್ಯವಸ್ಥೆ, ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ನಿಂದಾಗಿ ಕೂದಲು ಉದುರುವ ಸಮಸ್ಯೆ ಕಾಡಬಹುದು. ಹಾಗಿರುವಾಗ ಕೆಲವು ಮನೆ ಮದ್ದುಗಳು ಇದಕ್ಕೆ ಪರಿಹಾರ.
ನಿಮ್ಮ ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಹೇಗೆ ಮುಖ್ಯವೋ ಅದೇ ರೀತಿ ಕೂದಲಿಗೆ ಎಣ್ಣೆಯ ಮಸಾಜ್ ಮಾಡುವ ಮೂಲಕ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ವಾರಕ್ಕೆ ಎರಡು ಬಾರಿಯಾದರೂ ಮಸಾಜ್ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.
ಯುವತಿಯರು ಕೂದಲನ್ನು ಬಿಗಿಯಾಗಿ ಕಟ್ಟುತ್ತಾರೆ. ಆ ಅಭ್ಯಾಸವನ್ನು ಇಂದಿನಿಂದಲೇ ಬಿಟ್ಟುಬಿಡಿ. ತುಂಬಾ ಬಿಗಿಯಾಗಿ ಕಟ್ಟುವ ಮೂಲಕ ಕೂದಲ ಬುಡ ದುರ್ಬಲಗೊಳ್ಳುತ್ತದೆ. ಇದರಿಂದ ಕೂದಲು ಕಿತ್ತು ಬರುವ ಸಾಧ್ಯತೆಗಳು ಹೆಚ್ಚು.
ನೆತ್ತಿಯ ಭಾಗಕ್ಕೆ ಎಣ್ಣೆ ಸವರಿ ಜೋರಾಗಿ ಉಜ್ಜುವ ಅಭ್ಯಾಸ ತಪ್ಪು. ಜತೆಗೆ ಕೂದಲನ್ನು ಎಳೆಯುವುದು, ಮಡಿಸುವ ಅಭ್ಯಾಸವನ್ನು ಕಡಿಮೆ ಮಾಡಿ
ಹೇರ್ ಸ್ಟ್ರೇಟ್ನರ್, ಹೇರ್ ಡ್ರೈಯರ್ ಉಪಯೋಗಿಸುವುದನ್ನು ಆದಷ್ಟು ತಪ್ಪಿಸಿ. ಇದರಿಂದ ಕೂದಲು ಹೆಚ್ಚು ದುರ್ಬಲಗೊಳ್ಳುತ್ತದೆ
ಕಲರ್ ಮಾಡುವುದು ಅಥವಾ ರಾಸಾಯನಿಕಗಳ ಬಳಕೆಯನ್ನು ತಪ್ಪಿಸಿ. ಇದು ಕೂದಲಿಗೆ ಹೆಚ್ಚು ಹಾನಿ ಮಾಡುತ್ತವೆ
ನಿದ್ರೆಯ ಕೊರತೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ನಿದ್ರಿಸುವುದನ್ನು ಮತ್ತು ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ
ನೀವು ಸೇವಿಸುವ ಆಹಾರ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು, ಮೊಸರು, ಮಜ್ಜಿಗೆ, ಮೊಳಕೆಯೊಡೆದ ಕಾಳುಗಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಜತೆಗೆ ಕೂದಲಿನ ಆರೋಗ್ಯವನ್ನೂ ಸುಧಾರಿಸುತ್ತದೆ
ಸಾಕಷ್ಟು ನೀರು ಕುಡಿಯಿರಿ. ಥೈರಾಯ್ಡ್ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಕಾಡುತ್ತಿದ್ದರೆ ಸಾಕ್ಟು ನೀರು ಕುಡಿಯುವುದು ಉತ್ತಮ