ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ..!

ಸರ್ವಗುಣಸಂಪನ್ನ ಸಾಮ್ರಾಟ ಕೃಷ್ಣದೇವರಾಯ: ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ ನರಸನಾಯಕ  1509 ರಿಂದ 1529ರ ಹೊರಗೆ ಸರ್ವೋತ್ಕೃಷ್ಟ ರಾಜ್ಯಾಡಳಿತವನ್ನು ನಡೆಸಿದನು. ಎಲ್ಲಾ ಇತಿಹಾಸಕಾರರು ಅವನನ್ನು ಓರ್ವ ಮಹಾನ್ ರಾಜ ಎಂದು ಸಂಬೋಧಿಸಿ ಪ್ರಶಂಸಿಸಿದ್ದಾರೆ. ಪ್ರತಿಯೊಂದು ವಿಭಾಗದ ಮೇಲೆ ಅವನ ಗಮನವಿತ್ತು. ಅವನ ರಾಜ್ಯದಲ್ಲಿ ಪ್ರಜೆಗಳಿಗೆ ನ್ಯಾಯ ದೊರೆಯುತ್ತಿತ್ತು. ರಾಜ್ಯವು ಸಮೃದ್ಧವಾಗಿತ್ತು. ಮಧ್ಯಯುಗದಲ್ಲಿ ಅವನು ದಕ್ಷಿಣ ಭಾರತವನ್ನು ಐಶ್ವರ್ಯವಂತ ಗೊಳಿಸಿದನು. ಆಗ ದಕ್ಷಿಣ ಭಾರತವು ಬೌದ್ಧಿಕ ದೃಷ್ಟಿಯಿಂದ ಮಾತ್ರವಲ್ಲ. ಸಾಂಸ್ಕೃತಿಕ ದೃಷ್ಟಿಯಿಂದಲೂ ಕಲಶ ದಂತಿತ್ತು, ಅವನು ಸ್ವತಃ ಮಹಾಪರಾಕ್ರಮಿ. ಕುಷಗ್ರ ಸೇನಾಪತಿ ಹಾಗೂ ಮಹಾನ್ ಯೋಧನಾಗಿದ್ದನು. ಅವನು ಎಲ್ಲೆಡೆ ವಿಜಯ ಗಳಿಸಿದನು. ಅವನಿಗೆ ಸೋಲು ಎಂಬುವುದೇ  ತಿಳಿದಿರಲಿಲ್ಲ,

ವಾಗ್ಮಯದಲ್ಲಿ ಅವನ ಅಭಿವೃದ್ಧಿಯು ಎಷ್ಟು ಅಪೂರ್ವವಾಗಿ ತ್ತೆಂದರೆ ಪ್ರಜೆಯು ಅವನನ್ನು ಅಭಿನವ ಭೋಜ ಎಂದು ಕರೆಯುತ್ತಿದ್ದರು. ಅವನ ಅಮುಕ್ತಮಲ್ಯದಾ ಈ ತೆಲುಗು ಗ್ರಂಥ ಮತ್ತು ಸಂಸ್ಕೃತ ನಾಟಕವು ಇಂದಿಗೂ ಪ್ರಖ್ಯಾತವಾಗಿದೆ. ಅವನು ತೆಲುಗು. ಕನ್ನಡ ಹಾಗೂ ತಮಿಳು ಭಾಷೆಗಳ ಕವಿ ಹಾಗೂ ವಿದ್ವಾಂಸರಿಗೆ ಆಶ್ರಯದಾತ ನಾಗಿದ್ದನು. ಅವನು ಕೊಡುಗೈ ದಾನಿಯಾಗಿದ್ದನು ಅವನು ತಿರುಪತಿ ವೆಂಕಟರಮಣನ ಅನನ್ಯ ಭಕ್ತನಾಗಿದ್ದನು. ಇಂದಿಗೂ ತಿರುಪತಿ ಮಂದಿರದಲ್ಲಿ ಕೃಷ್ಣದೇವರಾಯನು ತನ್ನ ಇಬ್ಬರು ರಾಣಿಯರೊಂದಿಗೆ ಕೈಮುಗಿದು ನಿಂತಿರುವ ಶಿಲ್ಪವು ಕಂಡುಬರುತ್ತದೆ.

ವಿದ್ಯಾ ಸಂಪನ್ನ ಕವಿ ಹಾಗೂ ಸಾವಿರಾರು ಪಂಡಿತರ ಆಶ್ರಯದಾತನಾದ ಹಿಂದೂ ರಾಜ!: ನಮ್ಮ ಹಿರಿಯ ಪರಂಪರೆಯ ಹಾಗೂ ಕವಿ ಸಾಮ್ರಾಟನಾದ ಕೃಷ್ಣದೇವರಾಯನು ವಿದ್ಯಾ ಸಂಪನ್ನ ಹಾಗೂ ಸಾವಿರಾರು ಪಂಡಿತರಿಗೆ ಆಶ್ರಯದಾತ ನಾಗಿದ್ದನು. ಪಾಶ್ಚಾತ್ಯ ಇತಿಹಾಸಕಾರನಾದ ದೊಮಿಂಗೋ ಪೇಸನು ಕೃಷ್ಣದೇವರಾಯನು ಓರ್ವ ಕ್ಷಮಾಶೀಲ . ಪರೋಪಕಾರಿ. ಕೃಪಾಳು ರಾಜನಾಗಿದ್ದನು. ಅವನು ಮಹಾಪರಾಕ್ರಮಿ ಯೋಧ, ಓರ್ವ ಕಾರ್ಯಕ್ಷಮ  ರಾಜಕಾರಣಿ ಅಂತೆಯೇ ಕಲೆ ಹಾಗೂ ಸಾಹಿತ್ಯದ ಆಶ್ರಯದಾತ ನಾಗಿದ್ದನು. ಈ ಎಲ್ಲವುಗಳ ಮೇಲೆ ಮೇರುಮಣಿ ಎಂಬಂತೆ ಭಾರತವು ಆಧ್ಯಾತ್ಮಿಕ ಮೌಲ್ಯಗಳ  ಆಕರವಾಗಿದೆ. ರಾಜನು ಈ ಮೌಲ್ಯಗಳ ಸಂವರ್ಧನೆ ಹಾಗೂ ವೃದ್ಧಿಗಾಗಿ ಅವಿರತವಾಗಿ ಪ್ರಯತ್ನಶೀಲ ನಾಗಿದ್ದನು. ಸಂಪೂರ್ಣ ಜಗತ್ತಿನ ಎದುರು ಭಾರತದ ಪ್ರತಿಮೆಯನ್ನು ಎತ್ತಿ ನಿಲ್ಲಿಸುವಲ್ಲಿ ಈ ರಾಜನ ಯೋಗದಾನವು ಅತ್ಯಂತ ಹಿರಿಯದಾಗಿದೆ ಎಂದು ಹೇಳಿದ್ದಾನೆ.

ಭೂತಕಾಲದಲ್ಲಿನ ದಿವ್ಯ ಪರಂಪರೆಯನ್ನು ಬಹಿಷ್ಕರಿಸುವ ವರು ದೇಶದ ಭವಿಷ್ಯವನ್ನು ನಿರ್ಮಿಸಲಾರರು. ಚಂದ್ರಗುಪ್ತ, ಅಶೋಕ. ಶಾಲಿವಾಹನ. ವಿಕ್ರಮಾದಿತ್ಯ. ಸಮುದ್ರಗುಪ್ತ. ಯಶೋಧರ್ಮ. ಹರ್ಷವರ್ಧನ. ಸತ್ಯಾಶ್ರಯ. ಪುಲಿಕೇಶಿ. ರಾಷ್ಟ್ರಕೂಟ ಗೋವಿಂದ ಮಹದೇವ ರಾಯ ಯಾದವ. ಅಸಂಖ್ಯ ವೀರ ಚೌಡ ಮಣಿಗಳು. ಭರತಖಂಡವನ್ನು ಸೂರ್ಯನಂತೆ ಪ್ರಕಾಶಮಾನ ಗೊಳಿಸಿದ ಇತಿಹಾಸವನ್ನು ಇಂದು ನಾವು ಮರೆಯುವುದಾದರೂ ಹೇಗೆ..? ಯಾವ ರಾಷ್ಟ್ರವು ತನ್ನ ಭೂತಕಾಲದ ಭವ್ಯ ಇತಿಹಾಸವನ್ನು ಮರೆಯುತ್ತದೆ ಯೋ ಆ ಭೂತಕಾಲದ ಭವ್ಯ ಪರಂಪರೆಯನ್ನು ಬಹಿಷ್ಕರಿ ಸುತ್ತದೆಯೋ . ದುರ್ಲಕ್ಷಿಸಿ ತ್ತದೆಯೋ. ಅದನ್ನು ಅಪೇಕ್ಷಿಸುತ್ತದೆಯೋ , ಆ ರಾಷ್ಟ್ರದ ಭವಿಷ್ಯವು ಎಂದಿಗೂ ಸಾಕಾರವಾಗುವುದಿಲ್ಲ, ಇದು ತ್ರಿಕಾಲಾಬಾಧಿತ ಸತ್ಯವಾಗಿದೆ. ಇಂತಹ ದುರ್ದೈವಿ ರಾಷ್ಟ್ರವು ನಿಶ್ಚಿತವಾಗಿಯೂ ಅತ್ಯಂತ ಉಗ್ರವಾಗಿ ಅಂತ್ಯಗೊಳ್ಳುತ್ತದೆ..!

ಆಧಾರ : ಸಪ್ತಾಯಿಕ ಸಂತನ ಚಿಂತನ – ೧೭.೨.೨೦೧೧

ಸಂಗ್ರಹ

ಜಿಲ್ಲಾ ಸಮಿತಿ ಸಮನ್ವಯಕರ ಹೆಸರು

ಸಂಪರ್ಕ ಕ್ರಮಾಂಕ: ಶ್ರೀ ಸುಧೀರ ಬೇಲೇಕೇರಿ

೯೮೪೫೮೩೭೪೨೩

Discover more from Valmiki Mithra

Subscribe now to keep reading and get access to the full archive.

Continue reading