ಸುರಪುರ: ಕೋವಿಡ್ 3ನೇ ಅಲೆಯ ಮುಂಜಾಗೃತ ಕ್ರಮವಾಗಿ ಇಂದು ಸುರಪುರ ತಾಲೂಕಿನ ಸರಕಾರಿ ಆಸ್ಪತ್ರೆಗೆ ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಭೇಟಿ ನೀಡಿ ವೀಕ್ಷಿಸಿದರು.
3ನೇ ಅಲೆ ಎದುರಿಸಲು ಐ.ಸಿ.ಯು. ಬೆಡ್ ಹೆಚ್ಚಳ, ಆಮ್ಲಜನಕಯುಕ್ತ ಹಾಸಿಗೆಗಳ ಸೌಲಭ್ಯ,ಸಭೆಯಲ್ಲಿ ವೈದ್ಯರು ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುಂಜಾಗೃತೆ ಕ್ರಮವಹಿಸಬೇಕು. ಜನರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಮನವಿ ಮಾಡಬೇಕು. ಮಹಾಮಾರಿ ಕೊರೊನಾ ಮುಂಜಾಗೃತ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಮಾಸ್ಕ್ , ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿದ ಮಾರ್ಗ ಸೂಚಿಯನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ಸುತ್ತಾಡಿದ ಸ್ವಚ್ಛತೆ ಗಮನಿಸಿದರು ನಿತ್ಯವೂ ಸ್ವಚ್ಛತೆ ಕಾಪಾಡಲು ಸೂಚಿಸಿದರು.
ಡಾ , ರಾಜ ವೆಂಕಟಪ್ಪ ನಾಯಕ ಸುರಪುರ ತಾಲೂಕ ವೈದ್ಯ ಅಧಿಕಾರಿ, ಡಾ ದೇವರಾಜ್ ಡಿವೈಎಸ್ಪಿ ಸುರಪುರು, ಸುನಿಲ್ ಕುಮಾರ್ ಮೂಲಿಮನಿ ಸಿಪಿಐ, ಡಾ ಅಂಬುರಾವು,ಡಾ ಮಲ್ಲಿಕಾರ್ಜುನ್, ಡಾ ಶಪಿ ತಾಲೂಕು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.