ಡೆಂಗ್ಯೂ ಜ್ವರ ಕಂಟ್ರೋಲ್ ಮಾಡುತ್ತೆ ಪಪ್ಪಾಯಿ ಎಲೆಯ ರಸ..!

ಪ್ರಕೃತಿ ಚಿಕಿತ್ಸೆಗೆ ಬೇವು, ತುಳಸಿ, ಅಲೋವೆರಾ, ಪುದೀನ ಮುಂತಾದ ಎಲೆಗಳ ಬಳಕೆಯ ಬಗ್ಗೆ ನೀವು ಕೇಳಿರಬಹುದು. ಆದರೆ ಈ ಪಟ್ಟಿಯಲ್ಲಿ ಈಗ ಇತರ ಔಷಧೀಯ ಗುಣಗಳನ್ನು ಹೊಂದಿರುವ ಪಪ್ಪಾಯಿ ಎಲೆಗಳು ಕೂಡ ಸೇರ್ಪಡೆಯಾಗಿದೆ. ಹೌದು, ಪಪ್ಪಾಯಿ ಎಲೆಗಳನ್ನು ಆಯುರ್ವೇದದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿತ್ತು. ಇದಾಗ್ಯೂ ಇದನ್ನು ಮನೆಮದ್ದಾಗಿ ಬಳಸುತ್ತಿದ್ದವರು ಅತೀ ವಿರಳ ಎನ್ನಬಹುದು. ಆದರೆ ಇದೀಗ ಡೆಂಘೀ ಜ್ವರ ಚಿಕಿತ್ಸೆಗಾಗಿ ಪಪ್ಪಾಯಿ ಎಲೆಯೇ ಅತ್ಯುತ್ತಮ ಮದ್ದು ಎನ್ನುವಂತಾಗಿದೆ. ಡೆಂಘೀ ಜ್ವರದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಹಣ್ಣು ಎಷ್ಟು ಉಪಯುಕ್ತವೋ, ಅದರ ಎಲೆಗಳು ಸಹ ಅಷ್ಟೇ ಪ್ರಯೋಜನಕಾರಿ. ಆಯುರ್ವೇದದಲ್ಲಿ ಪಪ್ಪಾಯಿ ಎಲೆಗಳನ್ನು ಅನೇಕ ಗಂಭೀರ ರೋಗಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ಅಲ್ಲದೆ ಈ ಎಲೆಗಳನ್ನು ಪ್ರತಿನಿತ್ಯ ಸೇವಿಸಿದರೆ ಅನೇಕ ರೋಗಗಳನ್ನು ಸಹ ದೂರವಿಡಬಹುದು . ಹಾಗಿದ್ರೆ ಪಪ್ಪಾಯಿ ಎಲೆಗಳ ಪ್ರಯೋಜನಗಳೇನು ಎಂದು ತಿಳಿಯೋಣ.

1. ಡೆಂಘೀ ಜ್ವರಕ್ಕೆ ಮನೆಮದ್ದು:
ಮೊದಲ ತಿಳಿಸಿರುವಂತೆ ಪಪ್ಪಾಯಿ ಎಲೆಗಳು ಡೆಂಘೀ ಜ್ವರಕ್ಕೆ ಅತ್ಯುತ್ತಮ ಮನೆಮದ್ದು. ಡೆಂಘೀ ಜ್ವರ ಕಾಣಿಸಿಕೊಂಡರೆ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ವೇಗವಾಗಿ ಕುಸಿಯುತ್ತದೆ. ಪ್ಲೇಟ್‌ಲೆಟ್‌ಗಳ ಇಳಿಕೆ ಮತ್ತು ಅಧಿಕ ಜ್ವರದಿಂದಾಗಿ ದೇಹವು ನಿತ್ರಾಣಗೊಂಡಂತೆ ಭಾಸವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪಪ್ಪಾಯಿ ಎಲೆಗಳನ್ನು ಸೇವಿಸಿದರೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ. ಪಪ್ಪಾಯಿ ಎಲೆಯಲ್ಲಿ ಆಲ್ಕಲಾಯ್ಡ್ಸ್, ಪಪೈನ್ ನಂತಹ ಹಲವು ಪ್ರಮುಖ ಪೋಷಕಾಂಶಗಳಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  2. ಮಲೇರಿಯಾಗೆ ಔಷಧಿ:
ಆಯುರ್ವೇದ ಚಿಕಿತ್ಸೆ ಪದ್ಧತಿಯಲ್ಲಿ, ಪಪ್ಪಾಯಿ ಎಲೆಗಳ ರಸ ಅಥವಾ ಸಾರವನ್ನು ಮಲೇರಿಯಾ ಚಿಕಿತ್ಸೆಗೂ ಬಳಸಲಾಗುತ್ತದೆ. ಮಲೇರಿಯಾ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ಲಾಜ್‌ಮೋಡಿಸ್ಟಾಟಿಕ್ ಗುಣಗಳು ಪಪ್ಪಾಯಿ ಎಲೆಗಳಲ್ಲಿ ಕಂಡು ಬರುತ್ತವೆ. ಹೀಗಾಗಿ ಮಲೇರಿಯಾ ಜ್ವರಕ್ಕೂ ಪಪ್ಪಾಯಿ ಎಲೆ ಅತ್ಯುತ್ತಮ ಮನೆಮದ್ದು ಎನ್ನಬಹುದು.

3. ಅಜೀರ್ಣ ಸಮಸ್ಯೆಗೆ ಪರಿಹಾರ:
ಪಪ್ಪಾಯಿ ಎಲೆಗಳಲ್ಲಿ ಕೈಮೋಪೆಪಿನ್‌ನ ಪೆಪಿನ್ ಅಂಶಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಬೇಕಾದ ಅಗತ್ಯ ಫೈಬರ್ ಅನ್ನು ಒಳಗೊಂಡಿರುತ್ತವೆ. ಇದನ್ನು ಸೇವಿಸುವ ಮೂಲಕ ವಾಯು, ಎದೆ ಉರಿ, ಹುಳಿ ತೇಗು, ಅಜೀರ್ಣ ಸಮಸ್ಯೆ ಮತ್ತು ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಬಹುದು.

4. ಪಿತ್ತಜನಕಾಂಗದ ಆರೋಗ್ಯ:
ಪಪ್ಪಾಯಿ ಎಲೆಗಳ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಮೂಲಕ, ಲಿಪಿಡ್​ಗಳ ಪೆರಾಕ್ಸಿಡೇಶನ್ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣದಿಂದಾಗಿ ಕಾಮಾಲೆ, ಲಿವರ್ ಸಿರೋಸಿಸ್ ಮೊದಲಾದ ಪಿತ್ತಜನಕಾಂಗ (ಕರಳು) ಸಂಬಂಧಿಸಿದ ರೋಗಗಳು ದೂರವಾಗುತ್ತವೆ.

5. ಚರ್ಮ ಮತ್ತು ಕೂದಲ ಹಾರೈಕೆ:
ಪಪ್ಪಾಯಿ ಎಲೆಯನ್ನು ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು. ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರ ಸೇವನೆಯಿಂದ ಮೊಡವೆ ಸಮಸ್ಯೆ ಹಾಗೂ ಇತರೆ ಚರ್ಮದ ಸಮಸ್ಯೆಗಳು ದೂರವಾಗುತ್ತವಎ. ಹಾಗೆಯೇ ಈ ಎಲೆಗಳನ್ನು ರುಬ್ಬಿಕೊಂಡು ತಲೆಗೆ ಹಚ್ಚಿದರೆ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ.

ಪಪ್ಪಾಯಿ ಎಲೆಗಳನ್ನು ಬಳಸುವುದು ಹೇಗೆ?
ನೀವು ಪಪ್ಪಾಯಿ ಎಲೆಗಳ ಮೂಲಕ ಆರೋಗ್ಯವನ್ನು ವೃದ್ಧಿಸಲು ಬಯಸಿದರೆ, ಮೊದಲು ಪಪ್ಪಾಯಿ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಆ ಬಳಿಕ ಈ ಎಲೆಗಳನ್ನು ಜ್ಯೂಸ್ ಮಿಕ್ಸಿಯಲ್ಲಿ ಹಾಕಿ. ಮಿಕ್ಸಿ ಇಲ್ಲದಿದ್ದರೆ ಅರೆದು ರಸ ತೆಗೆದರೂ ಸಾಕು. ಬಳಿಕ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದನ್ನು ನೀವು ಫ್ರಿಜ್​ನಲ್ಲಿ ಶೇಖರಿಸಿಟ್ಟು, ಪ್ರತಿನಿತ್ಯ ಕುಡಿಯ ಬಹುದು. ಆದರೆ ವಾರಗಳ ಕಾಲ ರೆಫ್ರಿಜರೇಟರನಲ್ಲಿಡುವುದು ಒಳ್ಳೆಯದಲ್ಲ ಎಂಬುದು ನೆನಪಿರಲಿ.

Discover more from Valmiki Mithra

Subscribe now to keep reading and get access to the full archive.

Continue reading