ಕೋಲ್ಕತ್ತಾ; ಪಟನಾದಿಂದ ಗುವಾಹಟಿಗೆ ತೆರಳುತ್ತಿದ್ದ ಬಿಕನೇರ್ ಎಕ್ಸ್ ಪ್ರೆಸ್ ಗುರುವಾರ ಸಂಜೆ 5 ಗಂಟೆಗೆ ಪಶ್ಚಿಮ ಬಂಗಾಳದ ಜಲಪಾಯಿಗುರಿ ಜಿಲ್ಲೆಯಲ್ಲಿ ಹಳಿ ತಪ್ಪಿದೆ.
ಈ ಅವಗಢದಲ್ಲಿ ಕನಿಷ್ಠ 4 ರಿಂದ 5 ಬೋಗಿಗಳು ತಲೆಕೆಳಗಾಗಿ ಉರುಳಿದ್ದು, 3 ಸಾವು ಸಂಭವಿಸಿದೆ. 10ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.