ದೇಶದಾದ್ಯಂತ ಕೊರೊನಾ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದೆ. ಕೋವಿಡ್ ಇದೆ, ಇಲ್ಲ ಅನ್ನೋ ಚರ್ಚೆಗಳು ಆರಂಭದಿಂದಲೂ ಇದ್ದು ಇದೀಗ ನಿರ್ದೇಶಕ ಹಾಗೂ ಚಿತ್ರಕಥೆ ಬರಹಗಾರ ಅಗ್ನಿ ಶ್ರೀಧರ್ ಅವರ ಹೇಳಿಕೆ ಸಂಚಲನ ಮೂಡಿಸಿದೆ.
ಕೊರೊನಾ ಎಂಬುದು ಸುಳ್ಳು. ಇದೊಂದು ಮೆಡಿಕಲ್ ಮಾಫಿಯಾ. ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರು ನಾನು ಇದನ್ನೇ ಹೇಳಿದ್ದೇನೆ. ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಎಂದು ಅಗ್ನಿ ಶ್ರೀಧರ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.