ಬೆಂಗಳೂರು: ಬಹು ಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರ್ ಮೀ ಟೂ ಆರೋಪ ಮಾಡಿದ್ದರು. ಈ ಆರೋಪ ಸಂಬಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ತನಿಖೆ ನಡೆಸಿದ್ದಂತ ಪೊಲೀಸರು ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ವರದಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ಹೀಗಾಗಿ ನಟ ಅರ್ಜುನ್ ಸರ್ಜಾಗೆ ಮೀ ಟೂ ಆರೋಪದಲ್ಲಿ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.