ಮೈಸೂರಿನಲ್ಲಿ ಹೋರಾಟಗಾರು ಎಂಇಎಸ್ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ

ಮೈಸೂರು:  ವಿಜಯನಗರ 4ನೇ ಹಂತದಲ್ಲಿರುವ ಕನ್ನಡ ವೃತ್ತದಲ್ಲಿ ಕನ್ನಡ ಸೇವಾ ಬಳಗದ ಜಿಲ್ಲಾಧ್ಯಕ್ಷರಾದ ರವಿ ಸೀಗಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ವಿನೋದ್ ನಾಯಕ ನಾಗವಾಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರು ಎಂಇಎಸ್ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಬೀರಿಹುಂಡಿ ಬಸವಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾದೇಗೌಡ್ರು,ವಿನೋದ್ ನಾಗವಾಲ ಮಾತನಾಡಿ,  ಬೆಳಗಾವಿಯಲ್ಲಿ ಮರಾಠರ ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟಿ ವಿಕೃತಿ ಮೆರೆದಿದ್ದಾರೆ. ಅದಲ್ಲದೇ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿ ,ಬಣವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಂ.ಇ.ಎಸ್ ಕಿಡಿಗೇಡಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕು ಹಾಗೂ ಎಂ ಇ.ಎಸ್. ಸಂಘಟನೆಯನ್ನು ನಿಷೇಧಿಸಬೇಕೆಂದು. ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ.ನಿಷೇಧಿಸದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬರಹಂ ಹುಕಂ, ಕರ್ನಾಟಕ ಸರ್ಕಾರ ನಾಮ ನಿರ್ದೇಶನ ಸದಸ್ಯ ದಿಲ್ ದಾರ್ ರವಿ ರವರು, ಶ್ರೀ ಕನಕ ಶಕ್ತಿ ಮಹಿಳಾ ಸಂಘದ ಅಧ್ಯಕ್ಷರಾದ ನೇತ್ರಾ, ಕಂಬ್ರಳ್ಳಿ ವಿಷಕಂಠ ನಾಯಕ ರವರು ಅರುಣ್ ರವರು ಲಿಂಗದೇವರು, ಕೊಪ್ಪಲ್ ಕುಮಾರ್ ಬೋಗಾದಿ, ಲಾರಿ ಭರತ್ ಹಿನಕಲ್ ಚಂದ್ರು, ಬೊಮ್ಮೇನಹಳ್ಳಿ ಸುನಿಲ್, ಮುಂತಾದವರು ಭಾಗಿಯಾಗಿದ್ದರು,

Discover more from Valmiki Mithra

Subscribe now to keep reading and get access to the full archive.

Continue reading