ಶಹಾಪುರ: ತಾಲೂಕಿನ ಕೋಳ್ಳುರು ಗ್ರಾಮದಿಂದ ಶ್ರೀಶೈಲದವರಿಗೆ ಸತತ 16 ವರ್ಷಗಳಿಂದ ನಡೆಸಿಕೊಂಡು ಬಂದ ಪಾದಯಾತ್ರೆಯನ್ನು ಮಂಗಳವಾರ ಮತ್ತೆ ಹಮ್ಮಿಕೊಳ್ಳಲಾಗಿತ್ತು ಇದಕ್ಕೆ ಜೆಡಿಎಸ್ ಮುಖಂಡರಾದ ಹನುಮಗೌಡ ಬೀರಣಕಲ್ ಬಂದು ಶುಭ ಹಾರೈಸಿದರು.
ಅಷ್ಟೇ ಅಲ್ಲದೆ ಚಂದ್ರಶೇಖರಗೌಡ ಮಾಗನೂರು ಬಿಜೆಪಿ ಮುಖಂಡರು ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಅವರು, ಕೊಳ್ಳುರು ಗ್ರಾಮದ ನೂರಾರು ಭಕ್ತಾದಿಗಳು ಪಾದಯಾತ್ರೆ ಮಾಡಿದ್ದಾರೆ. ಕೋಳುರು ಟೊಣ್ಣುರು ಗ್ರಾಮದ ಭಕ್ತಾದಿಗಳು ಪಾದಯಾತ್ರೆ ಮೂಲಕ ಹೊರಟಿದ್ದಾರೆ ಎಂದರು.
ಕೋಳೂರು ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಸಣ್ಣ ಬಗೀ ಹನುಮಂತ್ರಾಯ ಬೆಣಕಲ್ ಹೊನ್ನಯ್ಯ ಗಟ್ಟಿ ಇವರೆಲ್ಲ ಕೂಡ ಭಾಗಿಯಾಗಿದ್ದರು.