ಸುರಪುರ : ಇಂದು ಕರವೇ ತಾಲೂಕು ಘಟಕ ಸುರಪುರ ಕಾರ್ಯಾಲಯದಲ್ಲಿ ದೇವರಗೋನಾಲ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳನ್ನುನೇಮಕ ಮಾಡಲಾಯಿತು. ಈ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ್ ಬೈರಿಮಡ್ಡಿ ಅವರು ಮಾತನಾಡಿ ನೂತನ ಪದಾಧಿಕಾರಿಗಳು ಗ್ರಾಮದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡುವುದು, ಕನ್ನಡ ನಾಡು-ನುಡಿ, ಗಡಿ, ನೆಲ, ಜಲ,ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ನಿರಂತರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು,ವಿಶೇಷವಾಗಿ ಯುವಕರು ಹೆಚ್ಚು ಹೆಚ್ಚು ಕರವೇ ಸೇರುತ್ತಿರುವುದು ಹೆಮ್ಮೆಯ ಸಂಗತಿ, ತಾವು ಕೂಡ ಯುವಕರಾಗಿದ್ದು ಸಕ್ರಿಯರಾಗಿ ನಾಡಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ, ತಾಲೂಕು ಉಪಾಧ್ಯಕ್ಷರಾದ ಶ್ರೀನಿವಾಸ ಭೈರಮಡ್ಡಿ, ಆನಂದ ಮಾಚಗುಂಡಾಳ, ಸಂಚಾಲಕರಾದ ಹಣಮಂತ್ರಾಯ ಹಾಲಿಗೇರಾ, ಯುವ ಘಟಕ ಅಧ್ಯಕ್ಷ ನಾಗರಾಜ ಡೊಣ್ಣೆಗೇರಿ,ನಗರ ಘಟಕದ ಅನಿಲ್ ಬಿರಾದರ್,ವಿದ್ಯಾರ್ಥಿ ಘಟಕದ ಆಂಜನೇಯ ದೇವರಗೋನಾಲ ಮುಂತಾದವರುಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳು : ಲಂಕೇಶ್ ಎಸ್. ( ಗೌರವಾಧ್ಯಕ್ಷರು ), ವೆಂಕಟೇಶ ಹೆಚ್. ಕುರಕುಂದಿ ( ಅಧ್ಯಕ್ಷರು), ಬಲಭೀಮ ಎ. ಹೊಸಮನಿ( ಉಪಾಧ್ಯಕ್ಷರು), ಅಂಬ್ಲಯ್ಯ ಬಿ. ಕೋತಿಗುಡ್ಡ( ಉಪಾಧ್ಯಕ್ಷರು),
ಶಶಾಂಕ್ ವಾಯ್. ದಳವಾಯಿ (ಪ್ರಧಾನ ಕಾರ್ಯದರ್ಶಿ), ಹಣಮಂತ್ರಾಯ ಎಮ್. ಹೊಸಮನಿ(ಸಹ ಕಾರ್ಯದರ್ಶಿ), ಮಲ್ಲಿಕಾರ್ಜುನ ಬಿ. ಕೊಂಗಂಡಿಕರ್(ಸಂಘಟನಾ ಕಾರ್ಯದರ್ಶಿ), ಅಭಿಷೇಕ್ ಎ. ದಿವಳಗುಡ್ಡ(ಖಜಾಂಚಿ)
ವರದಿ: ಸಿಂಧೂರ ಪಾಟೀಲ್