ವಾಲ್ಮೀಕಿ 4ನೇ ಜಾತ್ರಾ ಮಹೋತ್ಸವ ನಿಮಿತ್ಯ 5ನೇ ದಿನ ಶುಭ ಶುಕ್ರವಾರದಂದು ವಾಲ್ಮೀಕಿ ಜಾತ್ರಾ ಮಹೋತ್ಸವ ನಿಮಿತ್ಯ ಜಾತ್ರಾ ಸಮಿತಿ ಅಧ್ಯಕ್ಷರಾದ ಮೌನೇಶ ನಾಯಕ ಮ್ಯಾಕಲ್ ಹಾಗೂ ಅವರ ತಂಡದವರು ಕಾತರಿಕಿ ದದ್ದಲ್ ಗ್ರಾಮದಿಂದ ವಾಲ್ಮೀಕಿ ಜಾತ್ರೆ ಜಾಗೃತಿ ಸಭೆ ಪ್ರಾರಂಭ ಮಾಡಿದರು. ನಂತರ ಉಮಳಿ ಪನ್ನೂರು, ಕೊರವಿ, ಸಾದಾಪುರ, ಗೋವಿನ ದೊಡ್ಡಿ , ಚಿಮ್ಮಲಾಪುರ, ಕಪ್ಪಗಲ್ ಹಾಗೂ ಕೋಳಿ ಕ್ಯಾಂಪ್ ಗ್ರಾಮಗಳಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳನ್ನು ಭೇಟಿಯಾಗಿ, ವಾಲ್ಮೀಕಿ ಜಾತ್ರೆಗೆ ಆಹ್ವಾನ ಮಾಡಿ ಮಹರ್ಷಿ ವಾಲ್ಮೀಕಿ ಜಾತ್ರೆ ದೇಣಿಗೆ ರಶೀದಿ ಪುಸ್ತಕಗಳನ್ನು ನೀಡಿ ಆಯಾಯ ಗ್ರಾಮಗಳಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳಿಗೆ ಜವಾಬ್ದಾರಿ ಒಪ್ಪಿಸಲಾಯಿತು..
ಈ ಸಂದರ್ಭದಲ್ಲಿ ಆಯಾಯ ಗ್ರಾಮಗಳ ವಾಲ್ಮೀಕಿ ಸಮಾಜದ ಮುಖಂಡರುಗಳು, ಹಿರಿಯರು, ಆಯಾಯ ಗ್ರಾಮಗಳ ವಾಲ್ಮೀಕಿ ಸಂಘಟನೆಗಳ ಗ್ರಾಮ ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾಜದ ಯುವಕರು, ಉಪಸ್ಥಿತರಿದ್ದರು. ವರದಿ:ದೇವರಾಜ ನಾಯಕ ಮಾನವಿ.