ಗದಗ; ಬಿಜೆಪಿ ಟಿಕೆಟ್ ಗೆ ಮನವಿ

ಶ್ರೀಮತಿ ಉಷಾ(ರಜನಿ) ಮಹೇಶ ದಾಸರ ಸಂಸದರ ಕಚೇರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು


೩೫ನೇ ವಾರ್ಡನಿಂದ ಸ್ಪರ್ಧಿಸಲು ಅವಕಾಶ ಕೋರಿ ಮನವಿ
ದಾಸರ ಮನೆತನ ಗದಗ ಬೆಟಗೇರಿ ಅವಳಿ ನಗರದಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ಮನೆಯ ಸೊಸೆಯಾದ ನಾನು ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ೩೫ನೇ ವಾರ್ಡನಿಂದ ಎಸ್.ಸಿ. ಮಹಿಳಾ ಮೀಸಲು ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದು, ಪಕ್ಷದ ಅಧ್ಯಕ್ಷರು, ಅಭ್ಯರ್ಥಿಗಳ ಆಯ್ಕೆ ಸಮಿತಿ ಮುಖಂಡರು ನನಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶ್ರೀಮತಿ ಉಷಾ(ರಜನಿ) ಮಹೇಶ ದಾಸರ ಮನವಿ ಮಾಡಿದರು.
ಗದಗ-ಬೆಟಗೇರಿ ನಗರಸಭೆಗೆ ನಡೆಯಲಿರುವ ಚುನಾವಣೆಗೆ ಎಸ್.ಸಿ. ಮಹಿಳಾ ವರ್ಗಕ್ಕೆ ಮೀಸಲಾಗಿರುವ ೩೫ನೇ ವಾರ್ಡಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಗರದ ಭೂಮರಡ್ಡಿ ಸರ್ಕಲ್ ನಲ್ಲಿರುವ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುತ್ಥಳಿಗೆ ಶಿವಲಿಂಗಶಾಸ್ತ್ರಿ ಸಿದ್ದಾಪೂರ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಸಂಸದರ ಕಾರ್ಯಾಲಯಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಮಿತಿಗೆ ಶ್ರೀಮತಿ ಉಷಾ(ರಜನಿ) ಮಹೇಶ ದಾಸರ ಅವರು ತಮ್ಮ ಸಾಮಾಜಿಕ ಕಾರ್ಯ ಹಾಗೂ ರಾಜಕೀಯ ಹಿನ್ನೆಲೆಯ ವಿವರವುಳ್ಳ ಮನವಿಯೊಂದಿಗೆ ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ರಾಜ್ಯ ಮುಖಂಡರಾದ ರವಿ. ಬಿ. ದಂಡಿನ, ಜಿಲ್ಲಾ ಮುಖಂಡರಾದ ಈಶಣ್ಣ ಮುನವಳ್ಳಿ, ಪ್ರೇಮನಾಥ ಬಣ್ಣದ, ಪ್ರಶಾಂತ ನಾಯ್ಕರ, ಬಾಬು ಯಲಿಗಾರ, ಶ್ರೀಮತಿ ಶಾರದಾ ಸಜ್ಜನರ, ಶ್ರೀಮತಿ ಪಾರ್ವತೆಮ್ಮ ಮರಿಗೌಡರ ಅವರ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ತಮ್ಮ ಮಾವನವರಾದ ದಿ.ವೆಂಕಟೇಶ ದಾಸರ, ನನ್ನ ಪತಿ ಮಹೇಶ ದಾಸರ ಅವರು ಈಗಾಗಲೇ ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ನಾನು ಕಳೆದ ಆರು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ವ್ಯಾಸಂಗ ಮಾಡಿರುವ ನಾನು ಹಲವಾರು ಮಹಿಳಾ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಕೊರೋನಾ ಸಂಧರ್ಭಗಳಲ್ಲಿ ನಾನು ನನ್ನ ಪತಿಯವರಾದ ಮಹೇಶ ದಾಸರ ಅವರೊಂದಿಗೆ ೩೦ನೇ ವಾರ್ಡ ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ಹಲವಾರು ವಾರ್ಡಗಳಲ್ಲಿ ಜನಪರ ಸೇವೆ ಸಲ್ಲಿಸಿದ್ದೇವೆ. ವಿಧಾನ ಪರಿಷತ್, ವಿಧಾನಸಭೆ ಹಾಗೂ ಲೋಕಸಭೆ ಚುನಾವನೆಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಆಯ್ಕೆಗಾಗಿ ಶ್ರಮಿಸಿರುವೆ. ನನಗೆ ೩೫ನೇ ವಾರ್ಡ ಎಸ್.ಸಿ. ಮಹಿಳಾ ವರ್ಗಕ್ಕೆ ಮೀಸಲಿರುವ ಅಭ್ಯರ್ಥಿ ಸ್ಥನಕ್ಕೆ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ನೀಗಿಸಲು ತಾವು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಡುವುದರೊಂದಿಗೆ ಸ್ಪರ್ಧೆಗೆ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪರಶುರಾಮ ಬಂಕದಮನಿ, ಪ್ರವೀಣ ಪಾಟೀಲ, ಬಸವರಾಜ ತುಪ್ಪದ, ಸುರೇಶ ವಾಲಿ, ನವೀನ ಕುರ್ಡೇಕರ, ದೀಪಕ್ ಪವಾರ, ರಾಘವೇಂದ್ರ ಮಣ್ಣೂರ, ಅಶೋಕ ಶಂಡಗಿ, ಪ್ರಕಾಶ ಕೋಟಿ, ಗುರುಸಿದ್ಧೇಶ ವಾಲಿ, ಶ್ರೀಮತಿ ಚನ್ನಮ್ಮ ಬಂಕದಮನಿ, ಗಂಗಮ್ಮ ಗಡೆಪ್ಪನವರ, ನೇತ್ರಾವತಿ ದಾಸರ, ಮಂಜುಳಾ ಕೋಲಾರ, ಶಾರದಾ ದಾಸರ, ಪ್ರೇಮಾ ಗಡಾದ, ಶಾಂತಲಾ ದೊಡ್ಡಮನಿ, ಗಿರಿಜವ್ವ ಹಿರೇಮಠ, ಮೇಘಾ ಪಾಟಿಲ, ನಾಗರತ್ನಾ ಕುರಗೋಡ, ಶರಣವ್ವ ಬೂದಿಹಾಳ, ಸಲ್ಮಾ ಮುಳಗುಂದ, ಉಮಾ ರಕ್ಕಸಗೇರಿ, ರೇಣುಕಾ ಮುಳಗುಂದ, ರೇಣುಕಾ ಉಮಚಗಿ, ಎಸ್.ಎಂ. ಗೋಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಆನಂದ್ ಅಸುಂಡಿ

Discover more from Valmiki Mithra

Subscribe now to keep reading and get access to the full archive.

Continue reading