ರಾಯಚೂರು : ಭಾರತೀಯ ಜನತಾ ಪಕ್ಷದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ರಾಯಚೂರು -ಕೊಪ್ಪಳ ಜಿಲ್ಲಾ ನಾಮ ಪತ್ರ ಸಲ್ಲಿಸುವ ಮೊದಲು ಕರೆದ ಪೂರ್ವಭಾವಿ ಸಭೆಯಲ್ಲಿ ಎರಡು ಜಿಲ್ಲೆಯ ಸಂಸದರು ಪಕ್ಷದ ಶಾಸಕರು ಜಿಲ್ಲಾಪಂಚಾಯತಿ ಸದಸ್ಯರು ತಾಲ್ಲೂಕು ಪಂಚಾಯತ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಪಕ್ಷದ ಪ್ರಮುಖ ಆದಾರ ಸ್ಥಂಬವಾದ ಕಾರ್ಯಕರ್ತರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಸಭೆಯನ್ನುದ್ದೆಶಿಸಿ ಉದ್ಘಾಟನಾ ಭಾಷಣ ಮಾಡಿದ ಸನ್ಮಾನ್ಯ ಹಾಲಪ್ಪ ಆಚಾರ್ಯರು ವಿಧಾನ ಪರಿಷತ್ ಸದಸ್ಯ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ನಮ್ಮ ಭಾರತದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರರೇಂದ್ರ ಮೋದಿಯವರ ಹತ್ತು ಹಲವಾರು ಉತ್ತಮ ಮತ್ತು ಒಳ್ಳೆಯ ಸರಕಾರಿ ಯೋಜನೆಗಳು ನಮ್ಮ ಪಕ್ಷ ಅಭ್ಯರ್ಥಿಯ ಗೆಲವಿಗೆ ಸಹಾಕಾರಿಯಾಗುತ್ತವೆ. ಕಾಂಗ್ರೆಸ್ ಪಕ್ಷ ಏನೆ ಪ್ರಯತ್ನಿಸಿದರು ನಮ್ಮ ವಿರುದ್ಧ ಗೆಲುವು ಅಸಾಧ್ಯ ಎಂದು ಹೇಳಿದರು.
ನಂತರ ಮಾತನಾಡಿದ ಕೊಪ್ಪಳ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ ಸಂಗಣ್ಣ ಕರಡಿಯವರು ಮಾತನಾಡಿ ನಮ್ಮ ಭಾರತಿಯ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವಾರು ಉತ್ತಮ ಯೊಜನೆ ಹಾಗೂ ಕೊರೊನ ದಂತಹ ಮಾಹಾಮಾರಿ ರೋಗದಿಂದ ರಕ್ಷಿಸುವಂತ ಜನ ಸಮಾನ್ಯರ ಹಿತರಕ್ಷಣೆ ಯೊಜನೆ ನಮ್ಮ ಮೋದಿ ಸರ್ಕಾರದ ಯೋಜನೆ ನಮ್ಮ ಪಕ್ಷದ ಅಭ್ಯರ್ಥಿಯಾದ ವಿಶ್ವನಾಥ ಬನಹಟ್ಟಿಯವರಿಗೆ ಶ್ರೀ ರಕ್ಷೆಯಾಗಿದೆ ನಮ್ಮ ಗೆಲುವು ಖಚಿತ ಎಂದು ಹೇಳಿದರು.