ಮಸ್ಕಿ: ವಾಲ್ಮೀಕಿ ಜಾತ್ರೆ ಜಾಗೃತಿ ಸಭೆ

ಇಂದು ಮಸ್ಕಿಗೆ ಆಗಮಿಸಿದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಪುರಿ ಮಹಾ ಸ್ವಾಮೀಜಿ ಯವರು ಮಸ್ಕಿಯ ಸೋಮನಾಥ ದೇವಸ್ಥಾನದಲ್ಲಿ ವಾಲ್ಮೀಕಿ ಜಾತ್ರೆಯ ಜಾಗೃತಿ ಸಭೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಹಾರ ಹಾಕುವದರ ಮೂಲಕ ಮಾತನಾಡಿದರು. ನಾನು ನಿಮ್ಮನು ಬರೀ ಜಾತ್ರೆಗೆ ಕರಿಯಲು ಬಂದಿಲ್ಲ ಜೊತೆಗೆ ಜನಾಂಗದ ಒಗ್ಗಟ್ಟು ಮತ್ತು ಜಾಗ್ರತಿ ಮೂಡಿಸಲು ಬಂದಿದ್ದೇನೆ ಎಂದರು. ಮತ್ತು ಸಮಾಜ ಇತಿಹಾಸದವನ್ನು ಕುರಿತು ಮಾತನಾಡಿದರು.

ಇದೆ ಸಂದರ್ಭದಲ್ಲಿ ಮರಣ ಹೊಂದಿದ ಪುನೀತರಾಜ ಕುಮಾರರರನ್ನು ಸ್ಮರಸಿಕೊಂಡರು. ಮತ್ತು ಸಮಾಜಕ್ಕೆ ಮೀಸಲಾತಿ ಕಲ್ಪಿಸಿದ L.G ಹಾವನೂರ ಮತ್ತು ಡಾ. ಬಿ.ರ್ ಅಂಬೇಡ್ಕರ್ರವರು ಹಾಕಿಕೊಟ್ಟ ಶಿಕ್ಷಣ ಸಂಘಟನೆ ಹೋರಾಟದ ಹಾದಿಯನ್ನು ನಾವು ಸಾಗಬೇಕು ಎಂದರು ಮತ್ತು ಈ ಜಾತ್ರೆ ಬರೀ ಜಾತ್ರೆಯಲ್ಲ 7.5ಮೀಸಲಾತಿಯ ಜಾಗ್ರತಿ ಜಾತ್ರೆ ಎಂದರು.

ಇದೆ ಸಂದರ್ಭದಲ್ಲಿ ಬಿಜೆಪಿಯುವ ಮುಖಂಡರಾದ ಪ್ರಸನ್ನ ಪಾಟೀಲ್ ರವಿಗೌಡ ಪಾಟೀಲ್ ಮತ್ತು ವಾಲ್ಮೀಕಿ 3ನೇ ಜಾತ್ರೆಯ ಅಧ್ಯಕ್ಷರು ಆದ ಶ್ರೀ ಬಸವರಾಜ ತುಗಲದಿನ್ನಿ ಮತ್ತು ಜಿಲ್ಲಾ ವಾಲ್ಮೀಕಿ ಅಧ್ಯಕ್ಷರು ಆದ ಶ್ರೀ ಶೇಖರಾಗೌಡ ಮಾಲಿ ಪಾಟೀಲ್ ಮತ್ತು ಕಲ್ಯಾಣ ಕರ್ನಾಟಕ ಶ್ರೀ ರಾಮುಲು ಅಭಿಮಾನಿ ಸಂಘದ ಅಧ್ಯಕ್ಷರು ಶ್ರೀR. K ನಾಯಕ ರ್ವಾಲ್ಮೀಕಿ ಸಮಾಜದ ಮುಖಂಡರು ಸಮಾಜ ಎಲ್ಲರು ಭಾಗವಹಿದರು

ಮೌನೇಶನಾಯಕ ನಿರೋಪಿಸಿದರು. ಮತ್ತು ರಾಷ್ಟ್ರೀಯ ಮಟ್ಟದ ಬಿಲ್ಲುಗರಿಕೆ ಪ್ರತಿನಿಧಿಸಿದ ನಮ್ಮ ಜನಾಂಗ ಪ್ರತಿಭೆ ಮೌನೇಶನಾಯಕ ದೇವಪುರ ತಾಲೂಕು ಸುರಪುರ ಇವರನ್ನು ಶ್ರೀಗಳು ಸನ್ಮಾನಿಸಿದರು.

Discover more from Valmiki Mithra

Subscribe now to keep reading and get access to the full archive.

Continue reading