ದೇವದುರ್ಗ: ಭಗವಾನ್ ಬಿರಸಾ ಮುಂಡಾ ಜಯಂತಿ ಅಥವಾ ಗಿರಿಜನ ಸ್ವಾಭಿಮಾನ ದಿನಾಚರಣೆ ಹಾಗೂ ವಿವಿಧ ಸಂಸ್ಕೃತಿಕ ಕಾರ್ಯಕ್ರಮ

ದಿನಾಂಕ 16-11-2021 ರಂದು ಸಂಜೆ 6-00 ಗಂಟೆಗೆ ಅತಿ ವಿಜ್ರಂಭಣೆಯಿಂದ ಬಿರಸಾ ಮುಂಡಾ ಹಾಗೂ ಗಿರಿಜನ ಸ್ವಾಭಿಮಾನ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಸಾಯಂಕಾಲ 6:00 ಗಂಟೆಗೆ ಗುಡೆಲೇರದೊಡ್ಢಿಯಿಂದ ಭಗವಾನ್ ಬಿರ್ಸಾ ಮುಂಡಾ ಭಾವಚಿತ್ರ ಹಾಗೂ ವಾಲ್ಮೀಕಿ ಭಾವಚಿತ್ರ ವಾಹನದ ಮೂಲಕ ಮೆರವಣಿಗೆ ಮಾಡಲಾಯಿತು ಗ್ರಾಮದ ಡೊಳ್ಳು ವಾದ್ಯದವರು ಹಾಗೂ ಗ್ರಾಮದ ಮಾತೆಯರು ಪೂರ್ಣಕುಂಭ ಕಳಸಗಳೊಂದಿಗೆ ಹಿರಿಯರು ಹಾಗೂ ಯುವಕರು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ವನವಾಸಿ ಕಲ್ಯಾಣದ ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣದ ರಾಜ್ಯ ಅಧ್ಯಕ್ಷರಾದ ಮಾನ್ಯ ಶ್ರೀ ಮನುಕಾವೇರಪ್ಪ ಚೆಕ್ಕೇರ್ ಕೊಡಗು, ಮಾನ್ಯ ಶ್ರೀ ಶಿವರಾಜ್ ನಾಯಕ್ ವೆಂಗಳಾಪುರ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರು ದೇವದುರ್ಗ, ಮಾನ್ಯ ಶ್ರೀ ಬಸವರಾಜ ಪಾಟೀಲ್ ಅಮರಾಪುರ ಉದ್ದಿಮೆಗಳು, ಶ್ರೀ ತಿಮ್ಮಣ್ಣನಾಯಕ ಹೊಸೂರ್ ಜಿಲ್ಲಾ ಉಪಾಧ್ಯಕ್ಷರು ವಾಲ್ಮೀಕಿ ಸ್ವಾಭಿಮಾನ ಸಂಘ, ಶ್ರೀ ರಂಗಣ್ಣ ನಾಯಕ್ ಬುಂಕಲ್ದೊಡ್ಡಿ ವಾಲ್ಮೀಕಿ ಒಕ್ಕೂಟದ ಕಾರ್ಯದರ್ಶಿಗಳು ದೇವದುರ್ಗ, ಶ್ರೀ ರಂಗನಾಥ ನಾಯಕ ಜಾಲಹಳ್ಳಿ ಸ್ವಾಭಿಮಾನ ಸಂಘದ ಸಂಘಟನಾ ಕಾರ್ಯದರ್ಶಿಗಳು ಶ್ರೀ ಚಂದ್ರು ನಾಯಕ ಅಂಜಳಾ, ಶ್ರೀಮತಿ ಟೆಕರಿಬಾಯಿ ಲೋಕ ನಾಯಕ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕರಿಗುಡ್ಡ. ಶ್ರೀ ಮಹಮ್ಮದ್ ಜೈಹಿದ್ ಹುಸೇನ್ ಪಿಡಿಓ ಕರಿಗುಡ್ಡ. ಶ್ರೀ ಹನುಮಂತ್ರಾಯ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಯಲ್ಲಮ್ಮ ಗಂಡ ಶಿವಪ್ಪ ಗಾಲಿ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಹನುಮಂತಿ ರಾಮಲಿಂಗಪ್ಪ, ಶ್ರೀ ಹನುಮಂತರಾಯ ವೆಂಗಳಾಪುರ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ವೆಂಕಟೇಶ್ ಚಿಂತಲ ಕುಂಟ, ಶ್ರೀ ಕಾಶಪ್ಪ ದೊರೆ ಯಾದಗಿರಿ, ಶ್ರೀ ಸಿದ್ದಪ್ಪ ರಾಮಸಮುದ್ರ, ಶ್ರೀ ಸೋಮಯ್ಯ ಶ್ರೀ ಹನುಮೇಶ್ ಕುಮಾರಿ ಭಗಿನಿ ಅನ್ನಪೂರ್ಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಮಾನ್ಯ ಶ್ರೀ ಬಸವರಾಜ ಪಾಟೀಲ್ ಅಮರಾಪುರ ಉದ್ಘಾಟಿಸಿದರು.
ವೇದಿಕೆ ಮೇಲೆ ಅಧ್ಯಕ್ಷತೆಯನ್ನು ಶ್ರೀ ಶಿವರಾಜ್ ನಾಯಕ ವೆಂಗಳಾಪೂರು ವಹಿಸಿದ್ದರು. ಗೌರವಾಧ್ಯಕ್ಷರಾಗಿ ಶ್ರೀ ಶಿವಕುಮಾರ ಮಾಲಿಪಾಟೀಲ್ ವೆಂಗಳಾಪುರ ಹಾಗೂ ಮುಖ್ಯ ವಕ್ತಾರರಾಗಿ ಮನು ಕಾವೇರಪ್ಪ ಕೊಡಗು ಹಾಗೂ ಮುಖ್ಯಅತಿಥಿಗಳಾಗಿ ಶ್ರೀ ಗಂಗಾಧರ ನಾಯಕ್ ತಿಂಥಣಿ ಹಾಗೂ ಶ್ರೀ ತಿಮ್ಮಣ್ಣನಾಯಕ ಹೊಸೂರ್, ಜಿಲ್ಲಾ ಉಪಾಧ್ಯಕ್ಷರು ವಾಲ್ಮೀಕಿ ಸ್ವಾಭಿಮಾನ ಸಂಘ ರಾಯಚೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮುಖ್ಯ ವಕ್ತಾರರಾಗಿ ಮಾನ್ಯ ಶ್ರೀ ಮನು ಕಾವೇರಪ್ಪ ವನವಾಸಿ ಕಲ್ಯಾಣ ಪ್ರಾಂತ ಅಧ್ಯಕ್ಷರು ಮಾತನಾಡಿ ಭಗವಾನ್ ಬಿರ್ಸಾ ಮುಂಡಾರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಹಾಗೂ ಗಿರಿಜನ ಹಕ್ಕುಗಳಿಗಾಗಿ ಮತ್ತು ಭಾರತ ದೇಶದ ಸನಾತನ ಪರಂಪರೆ ಹೋರಾಟಗಳನ್ನು ಮಾಡಿದ್ದಾರೆ ಅವರು ಹುಟ್ಟಿದ್ದು 1875ರಲ್ಲಿ ಈಗಿನ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಉಲಿಹತು ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿದರು ಇವರು ಬಾಲ್ಯದಲ್ಲಿಯೇ ಜಾಣ್ಮೆ ಮತ್ತು ಸಂಘಟನಕೌಶಲ್ಯವುಳ್ಳವರಾಗಿದ್ದರು. ಬ್ರಿಟಿಷರ ದೌರ್ಜನ್ಯಗಳನ್ನು ಹಾಗೂ ಕ್ರೈಸ್ತ ಮಿಷನರಿಗಳ ದೌರ್ಜನ್ಯಗಳನ್ನು ಖಂಡಿಸಿದರು ಬಾಲ್ಯದಲ್ಲಿಯೇ ಶಾಲೆಯನ್ನು ತೊರೆದು ಸಮಾಜದ ಮೇಲೆ ಆಗುವ ಅನ್ಯಾಯಗಳ ವಿರುದ್ಧ ಹೋರಾಡಲು ಮುಂದಾದರು ಶ್ರೀ ಆನಂದ್ ಗುರೂಜಿ ಅವರಲ್ಲಿ ಉಳಿದು ವೇದ ಉಪನಿಷತ್ತುಗಳು ಹಾಗೂ ಮಹಾತ್ಮರ ಚರಿತ್ರೆಗಳನ್ನು ಅಧ್ಯಯನ ಮಾಡಿದರು ಮತ್ತು ಅವರು ಬುಡಕಟ್ಟು ಜನರಿಗೆ ಮತ್ತು ನಿಯಮಗಳನ್ನು ಪಾಲಿಸುವಂತೆ ಹೇಳಿದ್ದರು ಸ್ವಾಭಿಮಾನದಿಂದಿರಬೇಕು, ದೇವರು ಒಬ್ಬನೇ ಆತನನ್ನು ಆರಾಧಿಸಬೇಕು, ಸತ್ಯ ನ್ಯಾಯದಿಂದ ನಡೆಯಬೇಕು, ಶಾಂತಿ ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಬೋಧಿಸಿದರು ಹಾಗೂ ಅವರು ಆಯುರ್ವೇದದ ಚಿಕಿತ್ಸೆಯನ್ನು ನೀಡುತ್ತಿದ್ದರೂ ಜನರ ಸ್ವಾಸ್ಥ್ಯವನ್ನು ಕಾಪಾಡಲು ಮುಂಚೂಣಿಯಲ್ಲಿದ್ದರು ಇದರಿಂದ ಅವರಿಗೆ ಭಗವಾನ್ ಎಂದು ಕರೆಯುತ್ತಿದ್ದರು. ಹೀಗೆ ಹಲವಾರು ಹೋರಾಟಗಳ ಮೂಲಕ ಮುಂಡ ಜನ ಜಾತಿಯನ್ನು ಸಂಘಟಿಸಿದರು ಹಾಗೂ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ಮಾಡಿದರು ಕ್ರೈಸ್ತ ಮಿಷನರಿ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡಿದರು. ಹೀಗೆ ಅವರ ಹಲವಾರು ಹೋರಾಟಗಳ ಬಗ್ಗೆ ವಿವರಿಸಿದರು.
ಹಾಗೂ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಬಸವರಾಜ ಪಾಟೀಲ್ ಅಮರಾಪುರ ಅವರು ಮಾತನಾಡಿದರು ವನವಾಸಿ ಕಲ್ಯಾಣ ಕರ್ನಾಟಕವು ಆದಿವಾಸಿಗಳ ಬುಡಕಟ್ಟು ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವನವಾಸಿ ಕಲ್ಯಾಣದ ಕಾರ್ಯಗಳ ಬಗ್ಗೆ ವಿವರಿಸಿ ಹೇಳಿದರು.
ವೇದಿಕೆ ಮೇಲಿದ್ದ ಶ್ರೀ ಗಂಗಾಧರ ನಾಯಕರು ಮಾತನಾಡಿ ವನವಾಸಿ ಕಲ್ಯಾಣ ಕರ್ನಾಟಕ ಇಡೀ ಭಾರತ ದೇಶದಾದ್ಯಂತ ಸಂಘಟಿತವಾಗಿರುವ ಹಲವಾರು ಹಿರಿಯರು ಹಾಗೂ ಅನುಭವಿ ಉಳ್ಳವರು ಈ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದೂ ಭಗವಾನ್ ಭಗವಾನ್ ಬಿರ್ಸಾ ಮುಂಡಾ ಜಯಂತಿ ಹಾಗೂ ಗಿರಿಜನ ಸ್ವಾಭಿಮಾನ ದಿನಾಚರಣೆ ಇಡೀ ದೇಶಾದ್ಯಂತ ಆಚರಣೆ ಮಾಡುತ್ತಿದೆ ಭಾರತ ಸರ್ಕಾರವು ಕೂಡ ಈ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡಲು ಆದೇಶ ಮಾಡಿದೆ ಅದೇ ರೀತಿಯಾಗಿ ದೇವದುರ್ಗ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಮತ್ತು ಈ ಗ್ರಾಮದಲ್ಲಿ ಅದ್ದೂರಿಯಾಗಿ ಗಿರಿಜನ ಸ್ವಾಭಿಮಾನ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಗ್ರಾಮದಲ್ಲಿರುವ ಎಲ್ಲರೂ ಸೇರಿಕೊಂಡು ಬಹಳ ಉತ್ಸುಕತೆಯಿಂದ ಹಾಗೂ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದ್ದು ಬಹಳ ಸಂತೋಷ ಇದೇ ರೀತಿಯಾಗಿ ವನವಾಸಿ ಕಲ್ಯಾಣದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಭಾರತ ದೇಶದ ಪರಂಪರೆ-ಸಂಸ್ಕೃತಿಯನ್ನು ಹಾಗೂ ಭಾರತ ದೇಶವನ್ನು ಪರಮವೈಭವಕ್ಕೆ ತರೋಣ ಎಂದು ಹೇಳಿದರು
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ವೈಷ್ಣವಿ ನಡೆಸಿಕೊಟ್ಟರು.
ಪ್ರಾರ್ಥನ ಗೀತೆಯನ್ನು ಶ್ರೀ ಸೋಮಯ್ಯ ಕುರಿಲೇರದೊಡ್ಡಿ ನಡೆಸಿಕೊಟ್ಟರು.
ಸ್ವಾಗತ ಪರಿಚಯವನ್ನು ಶ್ರೀವೆಂಕಟೇಶ ದೇವದುರ್ಗ ಮಾಡಿಕೊಟ್ಟರು.
ವಂದನಾರ್ಪಣೆಯನ್ನು ಶ್ರೀ ಶಿವಾಜಿ ನಾಯಕ ವೆಂಗಳಾಪುರ ಮಾಡಿದರು ನಂತರ ರಾತ್ರಿ 8:00 ಇಂದ ಮನೆಪಾಠ ಕೇಂದ್ರದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ಉತ್ಸುಕತೆಯಿಂದ ನಡೆಯಿತು ಭರತನಾಟ್ಯ, ಅಣಕು ಪ್ರದರ್ಶನ, ಜಾನಪದ ನೃತ್ಯ, ಏಕಾಭಿನಯ ಪಾತ್ರಗಳು, ಸುಗಮ ಸಂಗೀತಗಳು ಹೀಗೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ಮಕ್ಕಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣದ ಕಾರ್ಯಕರ್ತರು ಪ್ರವಾಸಿ ಕಾರ್ಯಕರ್ತರು ಹಾಗೂ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading