ಸುರಪುರ ತಾಲೂಕಿನ ದೇವರಗೋನಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಭೀಮಣ್ಣ ದೀವಳಗುಡ್ಡ ಅವರು ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ವಾಲ್ಮೀಕಿ ಜಯಂತಿಯ ಪೂರಕವಾಗಿ ಅದ್ದೂರಿಯಾದ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದಾರೆ. ಅವರ ಈ ಕಾರ್ಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ತಾಲೂಕು ಘಟಕದ ಕಾರ್ಯದರ್ಶಿಗಳಾದ ಶ್ರೀ ಶರಣು ನಾಯಕ್ ದೇವರಗೋನಾಲ, ದೇವೇಂದ್ರಪ್ಪ ನಾಯ್ಕೋಡಿ, ದೊಡ್ಡ ದೇಸಾಯಿ, ನಾಗಪ್ಪ ಕನ್ನಳ್ಳಿ, ಸಣ್ಣ ದೇಸಾಯಿ, ಮಲ್ಲಯ್ಯ ದೀವಳಗುಡ್ಡ ಹಾಗೂ ದೇವರಗೋನಾಲ ಗ್ರಾಮದ ಗುರುಹಿರಿಯರು ಮತ್ತು ವಾಲ್ಮೀಕಿ ಸಮಾಜದ ಬಂಧುಗಳು ಖುಷಿ, ಸಂತಸ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.