ಚೇತನ ಫೌಂಡೇಶನ್ ಸಾರಥ್ಯದಲ್ಲಿ ನೆಡೆದ ಧಾರವಾಡ ದಸರಾ ಉತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ. “ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ” ಯನ್ನು ಧಾರವಾಡದ ಡಾ.ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಸಾಮಾಜಿಕ ಜಾಲತಾಣ ತಜ್ಞ ಗುಂಡ್ಲುಪೇಟೆ ರಾಜೇಶ್ ನಾಯಕ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗುಂಡ್ಲುಪೇಟೆಯ ಶ್ರೀಯುತ ಜಿ ಆರ್ ರಾಜೇಶ್ ನಾಯಕ ಇವರು ಸಾಮಾಜಿಕ ಕಾರ್ಯಕರ್ತ ಮತ್ತು ಸಾಮಾಜಿಕ ಜಾಲತಾಣಗಳ ತಜ್ಞರು ಆಗಿದ್ದು 3000 ಕ್ಕೂ ಹೆಚ್ಚು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಾಗೂ ಕರ್ನಾಟಕ ರೂಟ್ಸ್ ಟು ವಿಂಗ್ಸ್ ನ ತಂತ್ರಜ್ಞಾನ ಮುಖ್ಯಸ್ಥರಾಗಿ ಹಾಗೂ ಸಹೃದಯಿ ಫೌಂಡೇಶನ್ ನ ಕಾರ್ಯದರ್ಶಿಯಾಗಿ ಮತ್ತು ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು. ಬಡ ವಿಧ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗುತ್ತಿದೆ, ತಮ್ಮ ಸಹೃದಯಿ ಫೌಂಡೇಶನ್ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯಾರಿಗೆ, ಸ್ವಯಂ ಉದ್ಯೋಗ ತರಬೇತಿ ಹಾಗೂ ಉದ್ಯೋಗವನ್ನು ನೀಡಲಾಗುತ್ತಿದೆ.
ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ಮತ್ತು ಡಾ ಅಂಜನ ಭೂಷಣ್ ರವರ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯಪ್ರಸ್ತುತಿ ಕೇಂದ್ರ ರೂಪಿಸಿದ ನೃತ್ಯ ಬಲೆಯೊಂದು “ಶ್ರೀ ರಾಮಾನುಜ ಧನುರ್ ದಾಸ ವೈಭವಂ” ನೃತ್ಯ ರೂಪದಲ್ಲಿ ಶ್ರೀ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು. ಈ ನೃತ್ಯ ರೂಪಕವು ದೇಶದ ನಾನಾ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಂಡಿದೆ.
ತಿರುಪತಿಯ ನಾದ ನಿರಜನಂ ವೇದಿಕೆಯಲ್ಲಿ ಟಿಟಿಡಿ ಚಾನಲ್ ಮುಖಾಂತರ 170 ಕ್ಕೂ ಹೆಚ್ಚು ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ.
ಹಾಗೂ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡು ನುಡಿ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಪರಂಪರೆಗೆ ಶ್ರಮಿಸಿದ ಸೇವೆಯನ್ನು ಪರಿಗಣಿಸಿ ಸಮಾಜ ಸೇವೆಯೆಂದು ಪರಿಗಣಿಸಿ ಪ್ರತಿಷ್ಟಿತ “ಬಸವರತ್ನ ರಾಷ್ಟ್ರ ಪ್ರಶಸ್ತಿ” ಹಾಗೂ “ಸೇವಾ ಭೂಷಣ ರಾಜ್ಯ ಪ್ರಶಸ್ತಿ” ಇವರಿಗೆ ಲಭಿಸಿದೆ.