ರಾಜ್ಯ ಸರ್ಕಾರ ರಾಜಧನ ಸಂಗ್ರಹದಲ್ಲಿ ಕ್ರಷರ್ ಮಾಲೀಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸರ್ಕಾರ ತನ್ನ ನೀತಿಯನ್ನು ಹಿಂಪಡೆಯಬೇಕು ರಾಜ್ಯಾದ್ಯಂತ ಕಾರ್ಯನಿರ್ವಹಿಸ್ತಿದ್ದ 3 ಸಾವಿರ ಕ್ರಷರ್ಗಳು ಬಂದ್ ಆಗಿವೆ.
ಕಳೆದ ಮೂರು ದಿನಗಳಿಂದ ಕ್ರಷರ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಇಂದಿನಿಂದ ಲಾರಿ ಮಾಲೀಕರು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಇದರಿಂದಾಗಿ ಮನೆ ನಿರ್ಮಾಣ ಹಾಗೂ ಕಟ್ಟಡ ಕಾರ್ಮಿಕರಾಗಿ ದುಡಿಮೆ ಮಾಡುವ ದಿನಗೂಲಿ ನೌಕರರ ಕೆಲಸಕ್ಕೂ ಕುತ್ತು ತಂದಿದೆ.
ಈ ನೀತಿಯನ್ನು ಕೂಡಲೇ ಹಿಂಪಡಿಯಬೇಕು ಇಲ್ಲವಾದಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರ ಮುಂದುವರೆಸುವ ತೀರ್ಮಾನ ಮಾಡಿದ್ದೇವೆ. ಡಿ. 28 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ದೊಡ್ಡದಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಧ್ಯ ಈ ಮುಷ್ಕರದ ಬಿಸಿ ಬಹಳಷ್ಟು ಜನರಿಗೆ ತೊಂದರೆ ಉಂಟುಮಾಡಿದು , ಸರ್ಕಾರ ಕೂಡಲೇ ಈ ಕಡೆ ಗಮನ ಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದು, ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಗಮನ ಕೊಟ್ಟಿಲ್ಲ.