ಕೆ.ಜಿ.ಎಫ್. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ಕಳೆದಿವೆ.
ಸಲಾರ್ ಸಿನಿಮಾ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ಕಳೆದಿವೆ. ಟೀಸರ್ ಬಿಡುಗಡೆಯಾಗುತ್ತದೆ ಎಂದು ಫ್ಯಾನ್ಸ್ ಕಾದಿದ್ದರು. ಏನಾದರೂ ಒಂದು ಅಪ್‌ಡೇಟ್ ಕೊಡಿ, ಒಂದು ಪೋಸ್ಟರ್ ಆದರೂ ರಿಲೀಸ್ ಮಾಡಿ
ಶೇ.70%ರಷ್ಟು ಚಿತ್ರೀಕರಣ ಕಂಪ್ಲೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಸಂಕ್ರಾಂತಿ ಹಬ್ಬದ ದಿನ ಸಲಾರ್ ಸಿನಿಮಾದ ಗ್ಲಿಮ್ಸ್ ಬಿಡುಗಡೆ ಮಾಡಲಿದ್ದಾರೆ.
ಸಲಾರ್ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ.ಯಶ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು 10 ನಿಮಿಷ ಬಂದು ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಒಂದು ಪೋಸ್ಟರ್ ಹೊರತಾಗಿ ಯಾವುದೇ ಅಪ್‌ಡೇಟ್ ನೀಡದ ಕಾರಣ ಪ್ರಭಾಸ್ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಬೇಸರ ಹೊರಹಾಕುತ್ತಿದ್ದಾರೆ.