ಮಂಡ್ಯ: ರೈತರ ಬೇಡಿಕೆ ಈಡೇರಿಸುತ್ತಿಲ್ಲವೆಂದು ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಸಿಎಂ ಅಣಕು ಶವಯಾತ್ರೆ ಮಾಡಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಸಿಎಂ ಅಣುಕು ಶವಯಾತ್ರೆ ನಡೆಸಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕಬ್ಬಿನ ಬೆಲೆ ಏರಿಕೆ ಮಾಡಿ, ಹಾಲಿನ ದರ ಏರಿಕೆ ಮಾಡಿ ಎಂದು ರೈತರು 3 ದಿನದಿಂದ ಧರಣಿ ಕುಳಿತಿದ್ದಾರೆ. ಪ್ರತಿ ಟನ್ ಕಬ್ಬಿಗೆ 4,500 ರೂ, ಹಾಲಿನ ದರ ಪ್ರತಿ ಲೀ ಗೆ 40 ರೂ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇನ್ನು ಸಿಎಂ ಶವಯಾತ್ರೆ ವೇಳೆ ಬಾಯಿ ಬಡಿದುಕೊಂಡು ರೈತರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಸಿಎಂ ಅಣಕು ಶವಯಾತ್ರೆ ಮಾಡದಂತೆ ರೈತರನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರ ಮಾತಿಗೂ ಬಗ್ಗದ ರೈತರು ಸಿಎಂ ಅಣಕು ಶವಯಾತ್ರೆ ಮೆರವಣಿಗೆಯನ್ನು ಮುಂದುವರೆಸಿದ್ದಾರೆ. ನಾಲ್ಕು ಜನ ಹೆಗಲು ಕೊಟ್ಟು ಸಿಎಂ ಅಣಕು ಶವಯಾತ್ರೆ ಮಾಡುತ್ತಿದ್ದಾರೆ.