ಮಂಡ್ಯ: ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ. ನಾಗಮಂಗಲದಲ್ಲಿ 3 ಜನ ಪಕ್ಷೇತರರಾಗಿ ಸ್ಪರ್ಧೆ ಮಾಡೋಣ. ಸುರೇಶ್ ಗೌಡ, ಚಲುವರಾಯಸ್ವಾಮಿ ಇಬ್ಬರು ಕ್ಷೇತ್ರದಲ್ಲಿ ಪಕ್ಷಗಳ ಅಭ್ಯರ್ಥಿಗಳಾಗದೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿ ಎಂದು ಶಿವರಾಮೇಗೌಡ ಸವಾಲೊಡ್ಡಿದ್ದಾರೆ. ಅವರ ವಿರುದ್ಧ ನಾನು ಗೆಲ್ಲದೆ ಹೋದರೆ ಶಿರಚ್ಛೇದನ ಮಾಡಿಕೊಳ್ಳುತ್ತೇನೆ ಎಂದು ಶಿವರಾಮೇಗೌಡ ಅವರು ಹೇಳಿದ್ದಾರೆ.
ನಾಗಮಂಗಲದಲ್ಲಿ ನಾನೇ ಲೀಡ್ ನಲ್ಲಿ ಗೆಲ್ಲುತ್ತೇನೆ. ಪಾರ್ಟಿ ಮೇಲೆ ಯಾರು ಬೇಕಾದರೂ ಗೆಲ್ಲಬಹುದು ಬನ್ನಿ ಪಕ್ಷೇತರರಾಗಿ ನಿಂತು ತೋರಿಸೋಣ. ಈ ಹಿಂದೆ ಮಂಡ್ಯ ಜಿಲ್ಲಯಲ್ಲಿ ಜೆಡಿಎಸ್ ಭದ್ರಕೋಟೆ ಆಗಿತ್ತು. ಜಿಲ್ಲೆಯ ಕೆಲ ಭಟ್ಟಂಗಿಗಳಿಂದ ಜೆಡಿಎಸ್ ಭದ್ರಕೋಟೆ ಕುಸಿಯುತ್ತಿದೆ ನನಗೆ ದೇವೇಗೌಡ್ರು, ಕುಮಾರಸ್ವಾಮಿ, ನಿಖಿಲ್ ಬಗ್ಗೆ ಗೌರವ ಇದೆ. ಅವರ ಬಗ್ಗೆ ನಾನು ಹಗರುವಾಗಿ ಮಾತನಾಡುವುದಿಲ್ಲ ಎಂದರು.
ನಾಗಮಂಗಲ ಕ್ಷೇತ್ರದಿಂದ ಸುರೇಶ್ ಗೌಡಗೆ ಜೆಡಿಎಸ್ ನಿಂದ ಟಿಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ. ಜೆಡಿಎಸ್ ಪಕ್ಷ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮಾತ್ರ ಗೆಲುವು ಖಚಿತ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ಎಚ್ಚರಿಕೆ ಸಂದೇಶ ನೀಡಿದರು.