ಬೆಂಗಳೂರು: ಮೆಟ್ರೋವು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ.ಸ್ಮಾರ್ಚ್ ಕಾರ್ಡ್, ಟೋಕನ್ ಮತ್ತು ಪಾಸ್ ಮಾದರಿಯ ಟಿಕೆಟ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಮೆಟ್ರೋ ಅಪ್ಲಿಕೇಷನ್, ಪೇಟಿಎಂ ಮತ್ತು ಯಾತ್ರಾ ಅಪ್ಲಿಕೇಷನ್‌ನಲ್ಲಿ ಹಣ ಪಾವತಿಸಿ, ಕ್ಯೂಆರ್ ಕೋಡ್ ಡೌನ್‌ಲೋಡ್ ಮಾಡಬೇಕು. ಮೆಟ್ರೋ ಗೇಟ್‌ನಲ್ಲಿರುವ ಕ್ಯೂಆರ್ ಸ್ಕಾಯನರ್‌ಗೆ ಡೌನ್‌ಲೋಡ್ ಮಾಡಿರುವ ಕ್ಯೂಆರ್ ಕೋಡ್ ತೋರಿಸಿ ಸರಾಗವಾಗಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಬಹುದು.
ಕೆಲ ದಿನಗಳಲ್ಲಿ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಎಲ್ಲವೂ ಸುಸೂತ್ರವಾಗಿ ಸಾಗಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.