ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆದ ಕೆಲವು ಘಟನೆಗಳು ರಾಜ್ಯ ಪೊಲೀಸರ ನಿದ್ದೆಗೆಡಿಸಿದೆ.ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರುತ್ತಿದೆ. ಗಣೇಶ ಹಬ್ಬದ ವೇಳೆ ಸಾರ್ವಜನಿಕ ಗಣೇಶೋತ್ಸವ ಸರ್ವೇ ಸಾಮಾನ್ಯ. ಗಣೇಶೋತ್ಸವ ಕುರಿತು ಪ್ರತಿ ಏರಿಯಾದ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಗಣೇಶೋತ್ಸವ ಆಚರಣೆ ಮಾಡುತ್ತಿರುವವರು ಯಾರು ? ಯಾವ ಸ್ಥಳದಲ್ಲಿ ಗಣೇಶ ಕೂರಿಸಲಾಗುವುದು.ಗಣೇಶ ಕೂರಿಸುವ ಏರಿಯಾ ಎಂಥದ್ದು ? ಆ ಏರಿಯಾದಲ್ಲಿ ವಿವಾದಗಗಳೇನಾದರು ಇದೆಯಾ? ಆ ಜಾಗದಲ್ಲಿ ಎಷ್ಟು ಜನ ಸೇರಬಹುದು.ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂದಂತೆ ಸಂಪೂರ್ಣ ಎಚ್ಚರ ವಹಿಸಿಕೊಳ್ಳಲಾಗಿದೆ.