ವಿಜಯಪುರ; ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಪೋಟೋ ವಿಚಾರದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದಕ್ಕೆ ಬೊಮ್ಮಾಯಿ ಉತ್ತರ ಕೊಡಬೇಕು, ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ನಮ್ಮ ಕಾರ್ಯಕರ್ತರು ಮಲಗಿಲ್ಲ ಎಚ್ಚರ ಇದ್ದಾರೆ ಎಂದರು .
ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತೆ. ಆದ್ರೆ ಶಾಂತಿ ಕಾಪಡಬೇಕು ಅಂತ ನಮ್ಮ ಉದ್ದೇಶ. ಸ್ವಾತಂತ್ರ್ಯದ ದಿನ ನೆಹರು ಪೋಟೋ ಜಾಹಿರಾತಿನಲ್ಲಿ ಬಿಟ್ರು, ನೆಹರೂಗೆ ಅಪಮಾನ ಮಾಡಿದ್ರು.
ಕೊಡಗಿನಲ್ಲಿ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಜನರು ಬದಕುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ ಎಂದಿದ್ದು ನಂತರ ಮಾತನಾಡುತ್ತ ಇದೆ ರೀತಿ ಅಶಾಂತಿ ಉಂಟಾದ್ರೆ ಜನರ ಬದಕು ಕಷ್ಟ ಎಂದರು.