ಮಂಡ್ಯ:ಮೈಶುಗರ್ ಕಾರ್ಖಾನೆ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅವರು, ಇಂದು ಆಗುತ್ತಿರುವ ಸಂತೋಷ ಯಾವತ್ತೂ ಆಗಿಲ್ಲ. ನಾನು ಸಂಸದೆಯಾಗಿ 3 ವರ್ಷಗಳು ಕಳೆದಿವೆ.
ನನ್ನ ಚುನಾವಣೆಯ ವೇಳೆಯಲ್ಲಿ ಮಂಡ್ಯದ ರೈತರಿಗೆ ಮೈಶುಗರ್ ಚಾಲನೆ ಮಾಡೇ ಮಾಡಿಸುತ್ತೇನೆಂದು ವಾಗ್ದಾನ ಕೊಟ್ಟಿದ್ದೆ. ಒಬ್ಬರ ಹೋರಾಟದ ಫಲದಿಂದ ಇದು ಆಗಿಲ್ಲ. ಸಾಕಷ್ಟು ಜನರ ಫಲದಿಂದ ಪ್ರಾರಂಭವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಅಂಬರೀಶ್ ಅವರ ಕನಸು ಇದಾಗಿತ್ತು. ಎಷ್ಟೋ ವರ್ಷಗಳ ಹೋರಾಟದ ಫಲವಿದು. ಮಂಡ್ಯ ಜಿಲ್ಲೆಯ ರೈತರಿಗೆ ಐತಿಹಾಸಿಕ ಹಾಗೂ ಸಂಭ್ರಮದ ದಿನ ಇದು. ಕೊರೊನಾ ಪ್ರವಾಹದ ನಂತರ ಸಂಭ್ರಮಿಸಲು ಇದು ಅವಕಾಶ. ಮೈಶುಗರ್ ಆರಂಭಕ್ಕೆ ಸಹಕಾರ ಕೊಟ್ಟಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.