ಬೆಂಗಳೂರು: ಕನ್ನಡ, ಬೋಜಪುರಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸಿ ಅಸಖ್ಯಾಂತ ಅಭಿಮಾನಿ ವರ್ಗ ಹೊಂದಿದ ಅಚ್ಚ ಕನ್ನಡತಿ,ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ವಿಭಿನ್ನ ಕಥಾ ಹಂದರ ಹೊಂದಿರುವ ” ಕಾಸಿನಸರ” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ, ಮುತ್ತಿನ ಸರದ ಒಡತಿ ಹಾಗು ಹಿರಿಯ ನಟಿ ಉಮಾಶ್ರೀ ಅವರ ಜೊತೆ ಹರ್ಷಿಕಾ ಪೂಣಚ್ಚ ಅವರು ಕಾಸಿನ ಸರ ತೊಟ್ಟು ಅಭಿನಯಿಸುತ್ತಿದ್ದಾರೆ.
ಅನುಭವಿ ನಟಿ ಉಮಾಶ್ರೀ ಅವರೊಂದಿಗೆ ನಟಿಸುವ ಮೂಲಕ ತಮ್ಮ ಪಾತ್ರದ ಘನತೆಯನ್ನು ಹರ್ಷಿಕಾ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಕಾಸಿನಸರಕ್ಕೆ ಮತ್ತಷ್ಟು ಮೌಲ್ಯ ಬಂದಿದೆ. ‘ಈ ಚಿತ್ರದಲ್ಲಿ ಹರ್ಷಿಕಾ ಪಾತ್ರದ ಹೆಸರು ಸಂಪಿಗೆ. ಕೃಷಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಿನ ತಲೆಮಾರಿನ ಮಂದಿ ಓದು ಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಿರುವ ಸಂದರ್ಭದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾನು ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ನೈಜ ಪಾತ್ರವಾಗಿದ್ದು ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ’ ಎನ್ನುವ ವಿಶ್ವಾಸ ನಟಿ ಹರ್ಷಿಕಾ ಪೂಣಚ್ಚ ಅವರದು.
ಸಂತಸ ಹಂಚಿಕೊಂಡ ಹರ್ಷಿಕಾ
ಚಿತ್ರರಂಗದ ಎನ್ಸೈಕ್ಲೋಪೀಡಿಯಾದೊಂದಿಗೆ ಕೆಲಸ ಮಾಡುತ್ತಿದ್ದೇನೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ದಂತಕಥೆಯೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ಉಮಾಶ್ರೀ ಅಮ್ಮಾ ಅವರ ಶಕ್ತಿ, ನಿಲುವು, ಧ್ವನಿ, ಮಾಡ್ಯುಲೇಶನ್, ಸಮಯ, ಅವರ ನಟನೆ ನಿಜಕ್ಕೂ ವರ್ಣಿಲಸಾಧ್ಯ.ಅದ್ಬುತ ನಟಿಯೊಂದಿಗೆ ನಟಿಸುತ್ತಿರುವುದು ಗೌರವದ ಸಂಗತಿ ಎಂದಿದ್ದಾರೆ. ಉಮಾಶ್ರೀ ಅವರಂತಹ ದಿಗ್ಗಜರ ಜೊತೆಗೆ ಕಾಸಿನಸರದಲ್ಲಿ ನಟಿಸಯಲು ನಟಿಸಲು ಅವಕಾಶ ನೀಡಿದ ನಿರ್ದೇಶಕ ನಂಜುಂಡೇಗೌಡ ಸರ್ ಅವರಿಗೆ ಧನ್ಯವಾದ ಎಂದು ತಮ್ಮ ಸಂಸತ ಹಂಚಿಕೊಂಡಿದ್ದಾರೆ ಹರ್ಷಿಕಾ