ಐಶ್ವರ್ಯಾ ರಾಜೇಶ್ ನಟನೆಯ ‘ಡ್ರೈವರ್ ಜಮುನಾ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

ವಿಶಿಷ್ಟ ಪಾತ್ರಗಳ ಮೂಲಕ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸ್ತಿರುವ ನಟಿ ಐಶ್ವರ್ಯಾ ರಾಜೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಡ್ರೈವರ್ ಜಮುನಾ ಎಂಬ ಸಿನಿಮಾದಲ್ಲಿ ಐಶ್ವರ್ಯ ನಟಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

‘ವತ್ತಿಕುಚ್ಚಿ’ ಖ್ಯಾತಿಯ ಸಿನಿಮಾ ಖ್ಯಾತಿಯ ಪಾ. ಕಿನ್ಸ್ಲಿನ್ ಡ್ರೈವರ್ ಜಮುನಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಐಶ್ವರ್ಯಾ ರಾಜೇಶ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತಾರಾಬಳಗದಲ್ಲಿ ಆಡುಕಳಂ ನರೇನ್, ಶ್ರೀ ರಂಜನಿ, ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಅಭಿಷೇಕ್, ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ಪಾಂಡಿಯನ್, ಕವಿತಾ ಭಾರತಿ, ಪಾಂಡಿ, ಮಣಿಕಂದನ್, ರಾಜೇಶ್ ಮತ್ತು ಅನೇಕರು ಇದ್ದಾರೆ. ಗೋಕುಲ್ ಬೆನೊಯ್ ಛಾಯಾಗ್ರಹಣ, ಗಿಬ್ರಾನ್ ಸಂಗೀತ ಜವಾಬ್ದಾರಿ ಹೊತ್ತುಕೊಂಡಿದ್ದು, ಎಸ್.ಪಿ.ಚೌದರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಡ್ರೈವರ್ ಜಮುನಾ ಸಿನಿಮಾ ಮಹಿಳಾ ಕ್ಯಾಬ್ ಡ್ರೈವರ್ ಸುತ್ತ ನಡೆಯುವ ಘಟನೆಯಾಗಿದ್ದು, ಈ ಪಾತ್ರಕ್ಕಾಗಿ ಐಶ್ವರ್ಯಾ ಮಹಿಳಾ ಕ್ಯಾಬ್ ಡ್ರೈವರ್ ಭೇಟಿ ಮಾಡಿ ಅವರ ಹವಾ-ಭಾವವನ್ನು ತಮ್ಮ ಪಾತ್ರದಲ್ಲಿ ಅಳವಡಿಸಿಕೊಂಡಿದ್ದಾರೆ.

ಯಾವುದೇ ಡೂಪ್ ಬಳಸದೇ ಐಶ್ವರ್ಯಾ ತಮ್ಮ ಪಾತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್ ಕಹಳೆ ಮೊಳಗಿಸಿದೆ. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರಲಿದೆ.

Discover more from Valmiki Mithra

Subscribe now to keep reading and get access to the full archive.

Continue reading