ಬೆಂಗಳೂರು: ಮೇ.15 ರಂದು ನನ್ನ ಜನ್ಮ ದಿನಾಚರಣೆಯನ್ನು ನಾನು ಆಚರಿಸಿಕೊಳ್ಳೋದಿಲ್ಲ. ನನ್ನ ಮನೆ ಬಳಿಗೆ ಬರಬೇಡಿ ಅಂತಾ ಡಿಕೆಶಿವಕುಮಾರ್ ಮನವಿ ಮಾಡಿದ್ದಾರೆ.
ನಾನು ಉದಯಪುರದಲ್ಲಿ ಇರುತ್ತೇನೆ. ನನ್ನ ಜನ್ಮ ದಿನಾಚರಣೆ ನಿಮಿತ್ತ ಮಾಧ್ಯಮಗಳಿಗೆ ಜಾಹೀರಾತು ಕೊಡೋ ಬದಲಾಗಿ ಕಾಂಗ್ರೆಸ್ ಪಕ್ಷದಿಂದ ಸರ್ಕಾರದ ವಿರುದ್ಧ ನಡೆಸಿದಂತ ಹೋರಾಟ, ಪ್ರತಿಭಟನೆಗಳ ಬಗ್ಗೆ ಮಾಹಿತಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ತಮ್ಮ ಜನ್ಮದಿನ ಆಚರಿಸಬಾರದು. ಫ್ಲೆಕ್ಸ್, ಕಟೌಟ್, ಭಿತ್ತಿಚಿತ್ರ, ಪೋಸ್ಟರ್ ಯಾವುದನ್ನೂ ಹಾಕಬಾರದು ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.ಜನ್ಮದಿನ ನಿಮಿತ್ತ ಯಾರೂ ಕೂಡ ಮಾಧ್ಯಮಗಳಲ್ಲಿ ಶುಭಾಶಯಗಳ ಜಾಹೀರಾತು ನೀಡಬಾರದು..