ಅಸ್ಸಾಂ: ಅಸ್ಸಾಂನ ಮಹಿಳಾ ಸಬ್ ಇನ್ಸ್ಪೆಕ್ಟರೊಬ್ಬರು ಮದುವೆಗೂ ಮುನ್ನವೇ ತನ್ನ ಭಾವಿ ಪತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಮಹಿಳಾ ಸಬ್ ಇನ್ಸ್ಪೆಕ್ಟರ್ ಭಾವಿ ಪತಿಯು ನಕಲಿ ಗುರುತಿನ ಮೂಲಕ ಮದುವೆಯಾಗಲು ಯತ್ನಿಸಿದ್ದಲ್ಲದೇ, ಬೇರೆಯವರಿಗೂ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ವಿಷಯ ತಿಳಿದು ತನಿಖೆ ನಡೆಸಿದ ನಂತ್ರ ಸಬ್ ಇನ್ಸ್ಪೆಕ್ಟರ್ ಆತನನ್ನು ಬಂಧಿಸಿದ್ದಾರೆ.
ನಂತರ ಆರೋಪಿಯನ್ನು ನಾಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಅಸ್ಸಾಂನ ನಾಗಾವ್ ಪೊಲೀಸ್ ಠಾಣೆಯ ಮಹಿಳಾ ವಿಭಾಗದ ಪ್ರಭಾರಿ ಸಬ್ ಇನ್‌ಸ್ಪೆಕ್ಟರ್ ಜೋನ್ಮಣಿ ರಾಭಾ ಹಾಗೂ ರಾಣಾ ಪಾಗ್ ಜನವರಿ 2021ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಭೇಟಿಯಾಯಿತು.