ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಗಳಹಟ್ಟಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಿಡಿಲು ಬಡಿದು ತಾಯಿ( ಮಾರಕ್ಕ) ಮತ್ತು ಮಗ (ವೆಂಕಟೇಶ) ಮೃತಪಟ್ಟಿದ್ದರು.
ಇಂದು ಮೇಗಳಹಟ್ಟಿ ಗ್ರಾಮಕ್ಕೆ ತೆರಳಿ, ಮೃತರ ಕುಟುಂಬಕ್ಕೆ ಬಿ.ಶ್ರೀ ರಾಮುಲು ಸಂತಾಪ ಸೂಚಿಸಿ, ಧೈರ್ಯ ತುಂಬಿ, ಮೃತ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್ ಹಾಗೂ ಬಾಂಡ್ ವಿತರಿಸಿ ಈ ಘಟನೆ ದುರದೃಷ್ಟಕರ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಗ್ರಾಮದ ಗುರು- ಹಿರಿಯರು ಉಪಸ್ಥಿತರಿದ್ದರು.