ಹಾಸನ: ಪಿಎಸ್ಐ ನೇಮಕಾತಿ ಹಗರಣ ಮೂಲ ಕಿಂಗ್ ಪಿನ್ ಟಚ್ ಮಾಡಿದರೆ ಸರ್ಕಾರ ಉಳಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಾಯ ಪ್ರಾಧ್ಯಾಪಕ ನೇಮಕದಲ್ಲೂ 80 ಲಕ್ಷ ಅಕ್ರಮ ನಡೆದಿದೆ. ಇದು ಪಿಎಸ್ಐಗಿಂತ ದೊಡ್ಡ ಹಗರಣ. ಸಚಿವ ಅಶ್ವತ್ಥ್ ನಾರಾಯಣ್ ವಿಶ್ವವಿದ್ಯಾಲಯದ 150 ಕೋಟಿ ಪಿಂಚಣಿ ಹಣವನ್ನು ಡೈವರ್ಟ್ ಮಾಡಿದ್ದಾರೆ. ವಿಶ್ವವಿದ್ಯಾಲಯದ ಪಿಂಚಣಿಗೆ ಇಟ್ಟ ಹಣವನ್ನು ಅಶ್ವತ್ಥ್ ನಾರಾಯಣ್ ಯಾವ ಕಂಪನಿಗೆ ಕೊಟ್ಟಿದ್ದಾರೆ..? ಅಶ್ವತ್ಥ್ ನಾರಾಯಣ್ ಬೆಂಗಳೂರು ಇಂಜಿನಿಯರ್ ಕಾಲೇಜು ಮೆಕನಿಕಾಲ್ ಬ್ಲಾಕ್ ವಿಭಾಗಕ್ಕೆ ಕೆಲಸ ಮಾಡಿಸಲು 19 ಕೋಟಿಗೆ ಪತ್ರ ಬರೆದು 80 ಕೋಟಿಗೆ ತಲುಪಿಸಿದ್ದಾರೆ. ಯಾರಾದರು ಇದನ್ನು ಪ್ರಶ್ನೆ ಮಾಡಿದರೆ ಕಿತ್ತಾಕಿ, ಹೆಬ್ಬೆಟ್ಟು ಒತ್ತುವ ಆರ್ಎಸ್ಎಸ್ನವರನ್ನು ನೇಮಕ ಮಾಡುತ್ತಾರೆ. ಈ ಬಗ್ಗೆ ಸರ್ಕಾರಕ್ಕೆ ನಾನು ದಾಖಲೆ ನೀಡಲು ಸಿದ್ಧ. ಸರ್ಕಾರ ಸಾಬೀತು ಮಾಡಲು ಸಿದ್ಧವಿದೆಯಾ..? ಇದು ಉನ್ನತ ಶಿಕ್ಷಣ ಖಾತೆಯಲ್ಲಿ ನಡೆದಿರುವ ಕರ್ಮ. ಇನ್ನು ಪಿಎಸ್ಐ ನೇಮಕಾತಿಯಲ್ಲೂ ಕೊಟ್ಟೋನು ಕೋಡಂಗಿ ಇಸ್ಕೊಂಡೋನು ವೀರಭದ್ರ ಆಗಿದೆ ಎಂದು ಆರೋಪಿಸಿದ್ದಾರೆ.