ಕಲಬುರಗಿ: ಹಣದ ಹಿಂದೆ ಬಿದ್ದರೆ ದೇಶಕ್ಕಾಗಿ ಏನೂ ಮಾಡಲು ಸಾಧ್ಯವಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಕಲಬುರಗಿಯಲ್ಲಿ ಡಿವೈಎಸ್ಪಿ ಇನ್ಸ್ಪೆಕ್ಟರ್ ಹಾಗೂ ಪೊಲೀಸರನ್ನು ಅರೆಸ್ಟ್ ಮಾಡಿದ್ದೇವೆ. ಅನೇಕರು ಅನೈತಿಕ ರೀತಿಯಿಂದ ಹಣ ಮಾಡಲು ಹೊರಟಿದ್ದರು. ತ್ರಿವರ್ಣ ಧ್ವಜದ ಮುಂದೆ ಮಾಡಿದ್ದ ಪ್ರತಿಜ್ಞೆಯನ್ನು ಮರೆತಿದ್ದರು. ಹೀಗಾಗಿ ಇಂದು ಖಾಕಿ ಬಿಚ್ಚಿ ಜೈಲಿನಲ್ಲಿದ್ದಾರೆ ಎಂದರು.
ಇನ್ನು ಪ್ರಕರಣದ ಮಾಹಿತಿ ಬಂದ ಕೂಡಲೇ ತನಿಖೆಗೆ ಆದೇಶ ನೀಡಿದ್ದೇನೆ. ಪರಿಣಾಮವಾಗಿ 48 ಜನರನ್ನು ಬಂಧಿಸಲಾಗಿದೆ. ಇದು ಒಂದು ಎಚ್ಚರಿಕೆ ಗಂಟೆಯಾಗಿದೆ. ನಮ್ಮ ಸರ್ಕಾರಕ್ಕೆ ಬದ್ಧತೆಯಿದೆ. ಹೀಗಾಗಿ ಕ್ರಮಕೈಗೊಂಡಿದ್ದೇವೆ. ನಮ್ಮ ಪೊಲೀಸ್ ಇಲಾಖೆಯವರು ಪ್ರಕರಣದಲ್ಲಿ ಎಂಜಲು ಕಾಸಿಗೆ ಕೈ ಚಾಚಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.