ಮೈಸೂರು: ಯಡಿಯೂರಪ್ಪ ಅವಧಿಯಲ್ಲಾಗಲಿ, ಬಸವರಾಜ ಬೊಮ್ಮಾಯಿ ಅವಧಿಯಲ್ಲಾಗಲಿ ಯಾರಿಗೂ ಒಂದು ಮನೆ ನೀಡಿಲ್ಲ. ನಾನು ಕೇಳಿದ್ದು ಜನರಿಗೆ ಕಟ್ಟಿಕೊಟ್ಟ ಮನೆಯ ಬಗ್ಗೆ, ನೀವು ಕಟ್ಟಿಸಿಕೊಂಡ ಮನೆಗಳ ಬಗ್ಗೆ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎನ್ನುವ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಳ್ಳರು ಇನ್ನೇನು ಹೇಳುತ್ತಾರೆ..? ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನಾ..? ಹಗರಣದ ಬಗ್ಗೆ ಎಂಎಲ್ಸಿಗಳು ಪತ್ರ ಬರೆದಾಗ ಯಾಕೆ ತನಿಖೆ ಮಾಡಲಿಲ್ಲ ಇವರು..? ಯಾಕೆ ಮರು ಪರೀಕ್ಷೆ ಮಾಡಿದ್ರಿ..? ಯಾಕೆ ವರ್ಗಾವಣೆ ಮಾಡಿದ್ರಿ..? ಇವರು ಮಂತ್ರಿಯಾಗಲು ಲಾಯಕ್ಕಾ ನಾಲಾಯಕ್ಕಾ.. ? ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.