ತುಮಕೂರು ಸವರ್ಣೀಯರಿಂದ ಇಬ್ಬರು ದಲಿತ ಯುವಕರ ಭೀಕರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ತುಮಕೂರಿನ ಗಿರೀಶ್ ಮೂಡಲಗಿರಿಯಪ್ಪ ಮತ್ತು ಮಂಚಾಲದೊರೆ ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ.
ಗಿರೀಶ್ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದರೆ, ಪೆದ್ದನಹಳ್ಳಿ ಗಿರೀಶ್ ಮೃತದೇಹ ಕೆರೆಯಲ್ಲಿ ಸಿಕ್ಕಿದೆ. ಗುರುವಾರ ರಾತ್ರಿ (ಏ.21) ಗ್ರಾಮದಲ್ಲಿ ಸ್ಥಳೀಯ ದೇವರ ಉತ್ಸವ ನಡೆದಿದೆ. ಈ ವೇಳೆ ಆರೋಪಿಗಳು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಈ ಇಬ್ಬರು ಯುವಕರನ್ನು ಪುಸಲಾಯಿಸಿ, ಕರೆದೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ನಂದೀಶ್ ಎಂಬಾತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಏ.21ರ ರಾತ್ರಿ ಮನೆಗೆ ಬಂದು ಮಗನನ್ನು ಕರೆದುಕೊಂಡು ಹೋಗಿದ್ದ, ನಂತರ ಮಗ ಮನೆಗೆ ಬರಲಿಲ್ಲʼ ಎಂದು ಪೆದ್ದನಹಳ್ಳಿ ಗಿರೀಶ್ ಪೋಷಕರು ದೂರು ನೀಡಿದ್ದಾರೆ. ಕುಟುಂಬಸ್ಥರ ಮಾಹಿತಿ ಮೇರೆಗೆ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ನಂದೀಶ್ ಎಂಬಾತ ಮೃತ ಪೆದ್ದನಹಳ್ಳಿ ಗಿರೀಶ್‌ನ ಮನೆಗೆ ಬಂದು ಹೊರ ಕರೆದುಕೊಂಡು ಹೋಗಿದ್ದಾನೆ. ನಂತರ ತನ್ನ ಸ್ನೇಹಿತರ ಜೊತೆ ಸೇರಿ ಬೆಂಕಿಯಿಂದ ಸುಟ್ಟು ಕಿರುಕುಳ ನೀಡಿರುವುದಲ್ಲದೆ, ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ವೇಳೆ ಗಿರೀಶ್ ಮೂಡಲಗಿರಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಿರೀಶ್ ಮೃತದೇಹವನ್ನು ಕೆರೆಯೊಂದಕ್ಕೆ ಎಸೆಯಲಾಗಿದೆ.ಸಂಪೂರ್ಣ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿಯಲಿದೆ” ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 13 ಜನರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ನಂದೀಶ್ ಎಂಬಾತನನ್ನು ಸರಿಯಾಗಿ ತನಿಖೆ ಮಾಡಿದರೆ ಸತ್ಯ ಹೊರಬೀಳಲಿದೆ ಎಂದು ದಲಿತ ಸಂಘಟನೆಗಳ ಮುಖಂಡರೆಲ್ಲ ಒತ್ತಾಯಿಸಿದ್ದಾರೆ.