ತುಮಕೂರು: ತುಮಕೂರು- ನೆಲಮಂಗಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದು ತಮ್ಮ ತಮ್ಮ ಊರಿಗೆ ತೆರಳಬೇಕಿದ್ದ ಸವಾರರು, ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕಿರಿಕಿರಿ ಅನುಭವಿಸುವಂತಾಗಿದೆ.
ಎರಡೂ ಬದಿಯಲ್ಲಿ ಸುಮಾರು 5 ರಿಂದ 6 ಕಿ.ಮೀ ಟ್ರಾಫಿಕ್ ಜಾಮ್ ಆದ ಕಾರಣ ಟ್ರಾಫಿಕ್ ನಿಯಂತ್ರಿಸಲು ನೆಲಮಂಗಲ ಪೊಲೀಸರು ಹರಸಾಹಸ ಪಡುತ್ತೀದ್ದಾರೆ. ಬೂದಿಹಳ ಬಳಿ ಇರುವ ಸುತ್ತಮುತ್ತ ಇರುವ 10 ರಿಂದ 15 ಹಳ್ಳಿಗಳಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಲು ಕಾರಣ ಎನ್ನಲಾಗುತ್ತಿದೆ.