ಹಾಸನ: ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ಮಾಡಿರುವ ಬಿಜೆಪಿ ಸರ್ಕಾರದ ಮುಖಂಡರೇ ಇಂದು ನಿಯಮ ಉಲ್ಲಂಘಿಸಿದ್ದಾರೆ. ಸಚಿವ ಅಶ್ವಥ್ ನಾರಾಯಣ್ ಇಂದು ಹಾಸನಕ್ಕೆ ಆಗಮಿಸಿದ್ದು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಸನ ಡೈರಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ.
ಈ ವೇಳೆ ಸಚಿವ ಅಶ್ವಥ್ ನಾರಾಯಣ್ ಆಗಲಿ, ಅಶ್ವಥ್ ನಾರಾಯಣ್ ಸ್ವಾಗತಿಸಲು ಆಗಮಿಸಿದ ಬಿಜೆಪಿ ಮುಖಂಡರಾಗಲಿ, ಶಾಸಕ ಪ್ರೀತಂಗೌಡ ಆಗಲಿ ಯಾರೂ ಕೂಡ ಮಾಸ್ಕ್ ಧರಿಸಿಲ್ಲ. ಹೀಗಾಗಿ ಬಿಜೆಪಿ ಸರ್ಕಾರದ ನಿಯಮ ಜನರಿಗೊಂದು ಜನಪ್ರತಿನಿಧಿಗಳಿಗೊಂದು ಎನ್ನುವಂತಾಗಿದೆ.