ವಿಜಯನಗರ ಸಂಸ್ಥಾನದ 677ನೇ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ : ಹನುಮಂತಪ್ಪ ಸೋಮಲಾಪುರ

ಹರಿಹರರಾಯ ಮತ್ತು ಅವರ ಸಹೋದರ ಬುಕ್ಕ ರಾಯ ಅವರು 14 ನೇ ಶತಮಾನದಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿಯ ದಡದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನಾಕರ್ತರು. ಈ ಸಹೋದರರು ಪ್ರಸ್ತುತ ತೆಲಂಗಾಣ ಪ್ರದೇಶದ ವಾರಂಗಲ್‌ ಪ್ರದೇಶವನ್ನು ಆಳಿದ ಕಾಕತೀಯ ಸಾಮ್ರಾಜ್ಯದ ಕೊನೆಯ ರಾಜ ಪ್ರತಾಪರುದ್ರ ದೇವ II ರ ಸೈನ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. 1324 ರಲ್ಲಿ ದೆಹಲಿ ಸುಲ್ತಾನನಾದ ಮೊಹಮ್ಮದ್ ಬಿನ್ ತುಘಲಕ್ ಆಕ್ರಮಣದಿಂದಾಗಿ ಕಾಕತೀಯ ಸಾಮ್ರಾಜ್ಯದ ಪತನದ ನಂತರ, ಈ ಸಹೋದರರು ವಿಜಯನಗರದ ಸಮೀಪದಲ್ಲಿರುವ ಆನೆಗೊಂಡಿಯಲ್ಲಿರುವ ಜಂಬುಕೇಶ್ವರ (ಕಂಪಿಲಿ ದೇವಾ) ಸಂಸ್ಥಾನಕ್ಕೆ ಸೇರಿಕೊಳ್ಳುತ್ತಾರೆ. ಕಂಪಿಲೆದೇವನು ಗುಲ್ಬರ್ಗಾ ಸುಲ್ತಾನನ ವಿರುದ್ಧ ಬಂಡಾಯವೆದ್ದ ಆತನ ಆಪ್ತ ಸಂಬಂಧಿಯಾಗಿದ್ದ ಬಹದ್ದೀನ್ ಮಲಿಕ್ ಅವರಿಗೆ ಆಶ್ರಯ ನೀಡಿದ್ದನ್ನೇ ನೆಪಮಾಡಿಕೊಂಡು ಆನೆಗೊಂದಿಯ ಮೇಲೆ ಆಕ್ರಮಣ ಮಾಡಿ ಆನೆಗೊಂದಿಯನ್ನು ವಶಪಡಿಸಿಕೊಂಡಿದ್ದಲ್ಲದೇ, ಹರಿಹರ ಮತ್ತು ಬುಕ್ಕ ರಾಯರನ್ನು ಬಂಧಿಸಿ ದೆಹಲಿಗೆ ಕೊಂಡೊಯ್ಯುತ್ತಾನೆ. ಅಲ್ಲಿ ಅವರಿಬ್ಬರಿಗೂ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ. ಇದಾದ ಕೆಲ ದಿನಗಳ ನಂತರ ದಕ್ಷಿಣದಲ್ಲಿ ಮಲಿಕ್ ನಯೀಬ್ ರ ಕ್ರೂರ ಆಡಳಿತಕ್ಕೆ ನಲುಗಿದ ಸ್ಥಳೀಯರು ದಂಗೆಯನ್ನು ಏಳುತ್ತಾರೆ. ಈ ದಂಗೆಯನ್ನು ಹತ್ತಿಕ್ಕಲು ದಕ್ಷಿಣ ಭಾರತೀಯರೇ ಆಗಿದ್ದ ಹಕ್ಕ ಮತ್ತು ಬುಕ್ಕರನ್ನ್ನು ಸುಲ್ತಾನನ ಪ್ರತಿನಿಧಿಗಳಾಗಿ ಆಡಳಿತ ನಡೆಸಲು ಮತ್ತೆ ಆನೆಗೊಂಡಿಗೆ ಕಳುಹಿಸಲಾಯಿತು.

ಹಕ್ಕ-ಬುಕ್ಕರು ಪುನಃ ಆನೆಗೊಂದಿಗೆ ಮರಳುವಷ್ಟರಲ್ಲಿ ಮುಸ್ಲೀಂ ಆಡಳಿತಾಧಿಕಾರಿಗಳು ಸಾವಿರಾರು ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಲ್ಲದೇ, ಹಿಂದೂಗಳ ಮನೆಗಳನ್ನು ಲೂಟಿ ಮಾಡುತಾ. ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚರ ನಡೆಸಿ, ಚಿಕ್ಕ ಪುಟ್ಟ ಮಕ್ಕಳು ಎಂದೂ ನೋಡದೇ ಆವರನ್ನು ಕೊಂದು ಪುರುಷರನ್ನು ಗುಲಾಮರಂತೆ ತಮ್ಮ ಪ್ರಾಂತ್ರ್ಯಕ್ಕೆ ಸಾಗಿಸುತ್ತಿರುತ್ತಾರೆ. ಬಹಳ ಕ್ರೂರಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ, ಮಲಿಕಾಫರ್,ಗಯಾಸುದ್ದೀನ್ ಮತ್ತು ಮೊಹಮ್ಮದ್ ಬಿನ್ ತುಘಲಕ್ ಅವರುಗಳ ಸತತ ಆಕ್ರಮಣಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಪ್ರಕ್ಷುಬ್ಧತೆ ಮತ್ತು ನರಮೇಧವನ್ನು ಕಾಣುವಂತಾಗಿತ್ತು.

 

ಹರಿಹರರಾಯ ಮತ್ತು ಬುಕ್ಕಾ ರಾಯರು ಇಸ್ಲಾಂ ಧರ್ಮವನ್ನು ಬಲವಂತದಿಂದ ಸ್ವೀಕರಿಸಿದ್ದರೂ ಹೃದಯಾಂತರಾಳದಲ್ಲಿ ಅವರಿಗೆ ಹಿಂದೂ ಧರ್ಮಮದ ಬಗ್ಗೆಯೇ ಒಲವು ಇರುತ್ತದೆ. ಇದೇ ಸಮಯದಲ್ಲಿ ಶೃಂಗೇರಿ ಪೀಠಾಧೀಷರಾಗಿದ್ದ ಮತ್ತು ಹಿಂದೂಗಳನ್ನು ಮುಸಲ್ಮಾನರ ದುರಾಕ್ರಮಣದಿಂದ ತಪ್ಪಿಸಿ ಮತ್ತೆ ಹೈಂದವೀರಾಜ್ಯವನ್ನು ಎತ್ತಿಕಟ್ಟಲು ಫಣತೊಟ್ಟಿದ್ದಂತಹ ಗುರುಗಳಾದ ಶ್ರೀ ವಿದ್ಯಾರಣ್ಯರ ಸಂಪರ್ಕ ಹಕ್ಕ ಬುಕ್ಕರಿಗಾಗುವ ಮೂಲಕ ದಕ್ಷಿಣ ಭಾರತದ ಇತಿಹಾಸದ ಪುಟ ಸಂಪೂರ್ಣ ಬದಲಾವಣೆಯ ಹಾದಿಯನ್ನು ಹಿಡಿಯುತ್ತದೆ. ಹಕ್ಕ-ಬುಕ್ಕರನ್ನು ಮತ್ತೆ ಮತೃಧರ್ಮ ಹಿಂದೂ ಧರ್ಮಕ್ಕೆ ಕರೆತಂದ ಗುರು ವಿದ್ಯಾರಣ್ಯರು ಅವರನ್ನು ದೆಹಲಿ ಸುಲ್ತಾನರ ವಿರುದ್ಧ ಎತ್ತಿಕಟ್ಟುತ್ತಾರೆ.

ಹಕ್ಕ ಬುಕ್ಕರು ಆನೆಗೊಂದಿಗೆ ಬಂದ ನಂತರ ಪ್ರೋಲಾಯ ನಾಯ್ಕ, ಕಪಯ್ಯ ನಾಯ್ಕ ಮತ್ತು ಅವರ ಅನುಯಾಯಿಗಳಾದ ಪ್ರಾಲಯಾ ವೇಮಾ ರೆಡ್ಡಿ, ಸಿಂಗಮಾ ನಾಯ್ಕ ಮತ್ತು ಕರ್ನಾಟಕದ ವೀರ ಬಲ್ಲಾಳ ಅವರ ಸಂಪರ್ಕಕ್ಕೆ ಬರುತ್ತಾರೆ. ಹೊರಗಿನ ಪ್ರಪಂಚಕ್ಕೆ ಅವರು ಬಹುಮನಿ ಸುಲ್ತಾನನ ಆಡಳಿತಾಧಿಕಾರಿಗಳಾಗಿದ್ದರೂ ಪರೋಕ್ಷವಾಗಿ ಈ ಹಿಂದೂ ಹೋರಾಟಗಾರರಿಗೆ ಬೆಂಬಲವನ್ನು ನೀಡುತ್ತಲೇ, ಸುಮಾರು ಹತ್ತು ವರ್ಷಗಳ ಕಾಲ ಸುದೀರ್ಘವಾಗಿ ಗೆರಿಲ್ಲಾ ಮಾದರಿಯ ಹೋರಾಟದ ನಂತರ ಮುಸ್ಲಿಂ ದಂಡಾಧಿಕಾರಿಯಾಗಿದ್ದ ಮಲಿಕ್ ಮಕ್ಬೂಲ್ ಅವರನ್ನು 1335-36ರ ಅವಧಿಯಲ್ಲಿ ಸೆದೆಬಡಿದು ವಾರಂಗಲ್ಲಿನಿಂದ ಓಡಿಸುವ ಮುಖಾಂತರ ಹಿಂದೂಗಳು, ಅವರ ಸಂಸ್ಕೃತಿ, ಪರಂಪರೆ, ದೇವಾಲಯಗಳು, ಹಿಂದೂ ಹೆಣ್ಣುಮಕ್ಕಳು ಮತ್ತು ಅವರ ನಂಬಿಕೆಗನ್ನು ರಕ್ಷಿಸುವ ಸಲುವಾಗಿ ಸಮಾನ ಮನಸ್ಕರೆಲ್ಲರೂ ಒಂದಾಗುವ ಮೂಲಕ, ವಿಜಯನಗರ ಸಾಮ್ರಾಜ್ಯದ ಕನಸನ್ನು ಬಿತ್ತುತ್ತಾರೆ.

 

ರಾರ ವಾಚಕಮ್ ಎನ್ನುವ ಇತಿಹಾಸಕಾರರು ದಾಖಲಿಸಿರುವಂತೆ, ವಿಜಯನಗರ ಸಾಮ್ರಾಜ್ಯವು 1336 ರ ಏಪ್ರಿಲ್ 18 ರಂದು ಹಿಂದೂ ಪಂಚಾಗದಂತೆ, ಶಾಲೀವಾಹನ ಶಕೆ 1127 ಪ್ರಭವ ಚೈತ್ರ ಪೌರ್ಣಮಿ ಯಂದು ಸ್ಥಾಪಿಸಲ್ಪಟ್ಟಿದೆ. ಪ್ರಭವ ನಾಮ ಸಂವತ್ಸರದ ಬಹುಳ ಅಮಾವಾಸ್ಯೆಯ ಶಿತೀರವರಂ ರಾತ್ರಿಯ ಹೊತ್ತಿಗೆ ಎಲ್ಲಾ ವಿಜಯನಗರ ಸಾಮ್ರಾಜ್ಯದ ಅಡಿಪಾಯಕ್ಕೆ ಪ್ರಥಮ ಕಲ್ಲನ್ನು ಹಾಕುವ ಮಹಾಸಂಕಲ್ಪವನ್ನು ಮಾಡಿರುತ್ತಾರೆ. ಇದಕ್ಕಾಗಿಯೇ ಗುರು ವಿದ್ಯಾರಣ್ಯರು ತಾವೇ ಖುದ್ದಾಗಿ ಸಕಲ ವಾಸ್ತು ದೇವತೆಗಳನ್ನು ತಮ್ಮ ತಪಶಕ್ತಿಯಿಂದ ಆಹ್ವಾನಿಸಿ, ಧ್ರುವ ನಕ್ಷತ್ರದ ಸಹಾಯದಿಂದ ಉತ್ತರ ಮತ್ತು ದಕ್ಷಿಣದ ದಿಕ್ಕುಗಳನ್ನು ನಿರ್ಧರಿಸಿ,ತ್ರಿಶಂಕುವನ್ನು ಸ್ಥಾಪಿಸುತ್ತಾರೆ. ಪೂರ್ವ ಮತ್ತು ಪಶ್ಚಿಮ ತ್ಯ ದಿಕ್ಕುಗಳಲ್ಲಿ ಶಂಖಗಳು ಜೋಡಿಸಲ್ಪಟ್ಟವು ಮತ್ತು ಹದಿನಾರು ದಿಕ್ಕುಗಳಲ್ಲಿ ಕಂಬಗಳ ಅಡಿಪಾಯ ಕಟ್ಟುವ ಸಲುವಾಗಿ ದೊಡ್ಡ ದೊಡ್ಡ ಹಳ್ಳವನ್ನು ತೋಡಿಸಿ ಅದರೊಳಗೆ ದೊಡ್ಡ ಪ್ರಮಾಣದಲ್ಲಿ ಚಿನ್ನ, ವಜ್ರ ವೈಢೂರ್ಯಗಳನ್ನು ಸುರಿಯಲಾಯಿತು. ನಂತರ ಶ್ರೀ ಸಾಮ್ರಾಜ್ಯ ಲಕ್ಷ್ಮಿ ಯಂತ್ರವನ್ನು ನದಿಯ ತಟದಲ್ಲಿ ಸ್ಥಾಪಿಸಲಾಯಿತು. ವಾಸ್ತು ಯಂತ್ರ, ವಜ್ರ ಮತ್ತು ಪಾದರಸದ ಜೊತೆಗೆ ತೆಳುವಾದ ದಾರದ ಕೊನೆಯಲ್ಲಿ ಒಂದು ಇಟ್ಟಿಗೆಯನ್ನು ಕಟ್ಟಲಾಗಿತ್ತು. ತಾವು ಹೇಳುವ ಶುಭ ಸಮಯದಲ್ಲಿ ಆ ದಾರವನ್ನು ಕತ್ತರಿಸುವ ಮೂಲಕ, ಶುಭ ಗಳಿಗೆಯಲ್ಲಿ ಆ ಇಟ್ಟಿಗೆ ಅಡಿಪಾಯದ ಹಳ್ಳಕ್ಕೆ ಬೀಳುವಂತಹ ವ್ಯವಸ್ಥೆಯನ್ನು ಮಾಡಲಾಯಿತು. ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಶುಭಗಳಿಗೆಯಲ್ಲಿ ವಿಜಯನಗರದ ಸಾಮ್ರ್ಯಾಜ್ಯಕ್ಕೆ ಅಡಿಪಾಯವನ್ನು ಹಾಕಿದಲ್ಲಿ ವಿಜಯನಗರ ಸಾಮ್ರಾಜ್ಯ ಸುಮಾರು 3600 ವರ್ಷಗಳವರೆಗೆ ಅಭಿವೃದ್ಧಿ ಹೊಂದುತ್ತದೆ ಎನ್ನುವುದು ವಿದ್ಯಾರಣ್ಯರ ಲೆಖ್ಖಾಚಾರವಾಗಿತ್ತು. ಈ ರೀತಿಯ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ ನಂತರ ಗುರು ವಿದ್ಯಾರಣ್ಯರುಅಲ್ಲಿಯೇ ಇದ್ದ ಬೆಟ್ಟದ ಮೇಲೆ ಹೋಗಿ ಅದಕ್ಕೆ ಬೇಕಾದ ಎಲ್ಲಾ ವಿಧಿವಿಧಾನಗಳನ್ನೂ ಪೂರೈಸಿದ ನಂತರ ನಿಖರವಾದ ಲಗ್ನದ ಸಮಯದಲ್ಲಿ ಶಂಖ ಮತ್ತು ಜಾಗಟೆಗನ್ನು ಭಾರಿಸುವ ಮೂಲಕ ಸೂಚನೆ ನೀಡಿದ ತರುವಾಯ ಹಕ್ಕ ಬುಕ್ಕರು ಆ ದಾರವನ್ನು ಕತ್ತರಿಸುವ ಮುಖಾಂತರ ಆಡಿಪಾಯದ ಮೊದಲ ಕಲ್ಲನ್ನು ಹಾಕಬೇಕೆಂದು ಸೂಚಿಸಲಾಗಿತ್ತು.

ಈ ರೀತಿಯೆ ಎಲ್ಲಾ ಪೂರ್ವನಿಯೋಜಿತ ವ್ಯವಸ್ಥೆಗಳನ್ನು ಮಾಡಿದ ನಂತರ ಗುರುಗಳು ಬೆಟ್ಟದ ಮೇಲಿನ ಪೂಜೆಗೆ ಹೊರಟರು. ತಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಹಿಂದೂಗಳ ದೌರ್ಭಾಗ್ಯವೋ ಏನೋ, ಈ ರೀತಿಯಾಗಿ ಸಕಲ ವ್ಯವಸ್ಥೆ ಮಾಡಿದ್ದ ಆ ಬೆಟ್ಟದ ಕೆಳಗೆಯೇ ಶಿವಾರಾಧನೆ ಮಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯೊಬ್ಬರು ತಮ್ಮ ಪೂಜೆಯು ಮುಗಿದ ನಂತರ ಹೋರಾಗಿ ಶಂಖ ಮತ್ತು ಜಾಗಟೆಗಳನ್ನು ಊದಿದರು. ಈ ಜಾಗಟೆ ಮತ್ತು ಶಂಖದ ಸದ್ದನ್ನು ಕೇಳಿದ ಹಕ್ಕ ಬುಕ್ಕರು ಇದು ತಮ್ಮ ಗುರುಗಳಾದ ವಿದ್ಯಾರಣ್ಯರ ಸಂಜ್ಞೆ ಎಂದೇ ಭಾವಿಸಿ, ದಾರವನ್ನು ಕತ್ತರಿಸಿಯೇ ಬಿಟ್ಟರು, ಈ ಮೂಲಕ ನಿಗಧಿತ ಶುಭ ಕ್ಷಣ ಬರುವ ಮುನ್ನವೇ, ಇಟ್ಟಿಗೆ ಅಡಿಪಾಯದ ಹಳ್ಳಕ್ಕೆ ಬಿದ್ದಿತ್ತು. ಇದಾದ ಸ್ವಲ್ಪ ಸಮಯದಲ್ಲಿಯೇ ಮತ್ತೊಮ್ಮೆ ಶಂಖ ಮತ್ತು ಜಾಗಟೆಯ ಸದ್ದನ್ನು ಕೇಳಿ, ಏನೋ ಅಪಚಾರವಾಗಿದೆ ಎಂದು ಗ್ರಹಿಸಿದ ಹಕ್ಕ ಬುಕ್ಕರು ಬೆಟ್ಟದ ತುದಿಗೆ ಓಡಿಹೋಗಿ ಗುರುಗಳಿಗೆ ನಡೆದದ್ದಲ್ಲವನ್ನೂ ತಿಳಿಸಿದಾಗ, ಶುಭ ಲಗ್ನದ ಮುಂಚೆಯೇ ಅಡಿಪಾಯ ಹಾಕಲಾಗಿದೆ ಎಂಬ ವಿಚಾರವನ್ನು ತಿಳಿದ ವಿದ್ಯಾರಣ್ಯರು ಬಹಳವಾಗಿ ನೊಂದು ಕೊಂಡರು. ಕೂಡಲೇ ಅಡಿಪಾಯದ ಕಲ್ಲು ಬೀಳುವ ಕ್ಷಣದಲ್ಲಿ ಸಮಯ ಮತ್ತು ಗ್ರಹಗಳ ಸ್ಥಾನವನ್ನು ಪರಿಶೀಲಿಸಿದ ನಂತರ, ಈ ಸಾಮ್ರಾಜ್ಯವು ಪೂರ್ವಯೋಜಿತದಂತೆ 3600 ವರ್ಷಗಳ ಬದಲಾಗಿ ಕೇವಲ 260 – 300 ವರ್ಷಗಳ ಕಾಲ ಬಾಳುತ್ತದೆ, ನಂತರ ಶತ್ರುಗಳಿಂದ ನಾಶವಾಗಲಿದೆ ಎಂಬ ಭವಿಷ್ಯವನ್ನು ಬಹಳ ವಿಷಾಧನಿಯವಾಗಿ ತಿಳಿಸಿದರು. ವಿದ್ಯಾರಣ್ಯರು ನುಡಿದ ಭವಿಷ್ಯದಂತೆಯೇ, ಅಂದು ಸ್ಥಾಪಿತವಾದ ವಿಜಯನಗರ ನಗರವನ್ನು1336 ರಿಂದ 1646 ರವರೆಗೆ ಸುಮಾರು ಮೂರು ಶತಮಾನಗಳವರೆಗೆ ಹಿಂದೂ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದಿತು.

 

ಈ ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ಸಲುವ, ತುಳುವ ಮತ್ತು ಅರ್ವೀಡು ರಾಜವಂಶಗಳು ಆಳಿದವು. ಇವರೆಲ್ಲರೂ ಬಹಮನಿ ಸುಲ್ತಾನರು, ಅವರ ನಂತರ ಗೋಲ್ಕೊಂಡ, ಬಿಜಾಪುರ, ಅಹ್ಮದ್‌ನಗರ, ಬೀದರ್ ಮತ್ತು ಬೆರಾರ್‌ನ ಡೆಕ್ಕಾನಿ ಸುಲ್ತಾನರು, ಬಹಮನಿ ಸಾಮ್ರಾಜ್ಯ ದಂತಹ ಮುಸ್ಲೀಂ ರಾಜರು ದಕ್ಷಿಣ ಭಾರತದತ್ತ ತಲೆ ಹಾಕದಂತೆ ಯಶಸ್ವಿಯಾಗಿ ತಡೆಯುವದಲ್ಲಿ ಸಫಲರಾದರು. ತಮ್ಮ ಶ್ರೇಷ್ಠ ಆಡಳಿತದಿಂದಾಗಿ ಇಡೀ ದಕ್ಷಿಣ ಭಾರತದ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು ಮತ್ತು ಹಿಂದೂ ಸಂಸ್ಕೃತಿ, ಕಲೆ, ಶಿಲ್ಪಕಲೆ, ಸಂಗೀತ ಮತ್ತು ಸಾಹಿತ್ಯವು ಪ್ರವರ್ಧಮಾನಕ್ಕೆ ತರುವುದರಲ್ಲಿ ತಮ್ಮ ಅಮೋಘ ಕಾಣಿಯನ್ನು ನೀಡಿದರು. ಮೊಘಲ್ ರಾಜವಂಶದ ಚಕ್ರವರ್ತಿ ಬಾಬರ್‌ನ ಸಮಕಾಲೀನರಾಗಿದ್ದ 1509 ರಿಂದ 1529 ರವರೆಗೆ ಆಳ್ವಿಕೆ ನಡೆಸಿದ ಶ್ರೀ ಕೃಷ್ಣದೇವರಾಯರ ಸಮಯದಲ್ಲಿ ಈ ಸಾಮ್ರಾಜ್ಯವು ಉತ್ತುಂಗಕ್ಕೇರಿತು. ಇದೇ ಸಮಯದಲ್ಲಿಯೇ ಮುತ್ತು ರತ್ನಗಳನ್ನು ಬೀದಿ ಬೀದಿಗಳಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದರು ಮತ್ತು ಇಡೀ ಸಾಮ್ರಾಜ್ಯದಲ್ಲಿ ಒಬ್ಬನೇ ಒಬ್ಬ ಭಿಕ್ಷುಕರನ್ನೂ ಕಾಣಲಿಲ್ಲವೆಂದೇ ಚೀನಾದ ಇತಿಹಾಸಕಾರ ಹುಯ್ಯಾನ್ ಸ್ಯಾಂಗ್ ಎಂಬ ವಿದೇಶಿಗ ದಾಖಲಿಸುತ್ತಾನೆ ಎಂದರೆ ವಿಜಯನಗರ ಸಾಮ್ರಾಜ್ಯದ ವೈಭೋಗದ ಅರಿವಾಗುತ್ತದೆ. 23 ಜನವರಿ 1565 ರಂದು ತಾಳೀಕೋಟೇ ಕದನದಲ್ಲಿ ಸಾಮ್ರಾಜ್ಯವು ತೀವ್ರ ಹಿನ್ನಡೆ ಪಡೆಯಿತು. ಶ್ರೀಕೃಷ್ಣ ದೇವ ರಾಯರ ಮರಣದ ನಂತರ 25 ವರ್ಷಗಳ ಕಾಲ ವೈಭವಯುತವಾಗಿ ಆಳಿದ ವಿಜಯ ನಗರದ ಚಕ್ರವರ್ತಿ ಆರವೀಟಿ (ಅಳಿಯ ಸಂಪ್ರದಾಯ ) ರಾಮರಾಯನ ವಿರುದ್ಧ ದೊಡ್ಡ ಶಕ್ತಿಯೊಂದಿಗೆ ಡೆಕ್ಕನ್ನಿನ ಸುಲ್ತಾನರ ಮುಸ್ಲಿಂ ಒಕ್ಕೂಟದ ಸೈನ್ಯ ಆಕ್ರಂಮಣ ನಡೆಸಿತು. ರಾಮರಾಯನೂ ಅವರ ವಿರುದ್ಧ ಕ್ಷಾತ್ರ ತೇಜದಿಂದಲೇ ಎದುರಿಸಿದರಾದರೂ, ದುರದೃಷ್ಟವಶಾತ್, ಅವನ ಸೇನೆಯಲ್ಲಿದ್ದ ಮುಸ್ಲಿಂ ಸೈನಿಕರು ಮತಾಂಧತೆಯಿಂದ ರಾಜದ್ರೋಹ ಬಗೆದು ಹಿತಶತ್ರುಗಳಾಗಿ ಶತ್ರುಪಾಳ್ಯವನ್ನು ಸೇರಿದ ಪರಿಣಾಮ ಯುದ್ದದಲ್ಲಿ ಸೋತು ಸೆರೆಹಿಡಿಯಲ್ಪಟ್ಟರು. ರಾಮರಾಯವರ ವಿರುದ್ಧ ವಯಕ್ತಿಕ ದ್ವೇಷವನ್ನು ಹೊಂದಿದ್ದ ಅಹ್ಮದ್‌ನಗರದ ಸುಲ್ತಾನನಾದ ಹುಸೇನ್ ನಿಜಾಮ್ ಷಾ, ತನ್ನ ಕತ್ತಿಯಿಂದ ರಾಮರಾಯರ ತಲೆ ಕತ್ತರಿಸಿ ಕೊಲ್ಲುವ ಮೂಲಕ ವಿಜಯನಗರದ ಸಾಮ್ರಾಜ್ಯ ಅವಸಾನದ ಹಾದಿ ಹಿಡಿಯಿತು. ಯುದ್ಧ ಗೆದ್ದ ರಣೋತ್ಸಾಹದಲ್ಲಿ ವಿಜಯನಗರ ಪ್ರವೇಶಿಸಿದ ಮುಸ್ಲಿಂ ಸೈನ್ಯವು ಸುಮಾರು ಐದು ದೀರ್ಘ ತಿಂಗಳುಗಳ ಕಾಲ ಅಲ್ಲಿಯೇ ಉಳಿದಿದ್ದಲ್ಲದೇ. ಆ ಸಮಯದಲ್ಕಿಯೇ ಅಲ್ಲಿದ್ದ ಪ್ರತೀ ಸ್ಮಾರಕ, ಶಿಲ್ಪಗಳು, ಪ್ರತಿಯೊಂದು ಕಟ್ಟಡ, ಪ್ರತಿ ವಿಗ್ರಹವನ್ನು ನಾಶಪಡಿಸಿದರು ಮತ್ತು ಪಟ್ಟಣವನ್ನು ಸುಟ್ಟುಹಾಕುವ ಮೂಲಕ ಕೆಲವೇ ಕೆಲವು ತಿಂಗಳುಗಳ ಹಿಂದೆ ಪರಮ ವೈಭವದಿಂದ ಮೆರೆಯುತ್ತಿದ್ದ ಹಂಪೆ ಹಾಳು ಹಂಪೆಯಾಗಿ ಮಾರ್ಪಾಟಾಯಿತು.

 

ಈ ರೀತಿಯಾಗಿ ವಿಜಯನಗರದ ಹಿಂದೂ ಸಾಮ್ರಾಜ್ಯದ ವಿರುದ್ಧ ಮುಸ್ಲಿಂ ಸೈನ್ಯದ ಕೋಪ ಮತ್ತು ದ್ವೇಷದಿಂದಾಗಿ ಹಾಳಾದರೂ, ಸಾಮ್ರಾಜ್ಯವು ಸಂಪೂರ್ಣವಾಗಿ ನಾಶವಾಗಲಿಲ್ಲ. ರಾಮರಾಯರ ಸಹೋದರ ತಿರುಮಲ ರಾಯ ಅವರು ಪೆನುಕೊಂಡಕ್ಕೆ ತಪ್ಪಿಸಿಕೊಂಡು ಅಲ್ಲಿ ಅವರು ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಚಕ್ರವರ್ತಿ ಸದಾಶಿವರಾಯಲು ಅವರು ವಿವಾದಾಸ್ಪದವಾಗಿ ಕೊಲೆಯಾಗುವ ಮೂಲಕ ತುಳುವ ರಾಜವಂಶದ ಆಡಳಿತವು ನಿಂತುಹೋಯಿತು ಮತ್ತು ರಾಮರಾಯನ ಆರವೀಟಿ (ಅಳಿಯ ಸಂಪ್ರದಾಯ ) ರಾಜವಂಶವು ಸಾಮ್ರಾಜ್ಯವನ್ನು ಆಳಿತಾದಾದರೂ, ವಿಜಯನಗರ ಸಾಮ್ರಾಜ್ಯವು ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ, ಚದ್ರಗಿರಿಯಲ್ಲಿನ ವೆಂಕಟಪತಿರಾಯಲು II ಅಂತಹ ಆಡಳಿತಗಾರರು ಸಾಮ್ರಾಜ್ಯವನ್ನು ಬಹಳ ಮಟ್ಟಿಗೆ ಪುನರುಜ್ಜೀವನಗೊಳಿಸಿ.ಅಂತಿಮವಾಗಿ ಸ್ಥಳೀಯ ಅಧೀನ ಆಡಳಿತಗಾರರು ಮಾಡಿದ ದ್ರೋಹದಿಂದಾಗಿ ನಿಧಾನವಾಗಿ ದುರ್ಬಲಗೊಂಡಿತು ಮತ್ತು ಅಂತಿಮವಾಗಿ ಸಾಮ್ರಾಜ್ಯವು 1646 ರಲ್ಲಿ ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಯಿತು. ವಿಜಯನಗರದ ಕೊನೆಯ ಆಡಳಿತಗಾರ ಶ್ರೀ ರಂಗ III 1659 ರವರೆಗೆ ಬದುಕುಳಿದ್ದರು ಎಂದು ಇತಿಹಾಸಕರರು ತಿಳಿಸುತ್ತಾರೆ.

1336 ರಲ್ಲಿ ಸಂತ ವಿದ್ಯಾರಣ್ಯರ ಆಶೀರ್ವಾದದೊಂದಿಗೆ ಸ್ಥಾಪಿಸಲಾದ ಅದ್ಭುತ ಸಾಮ್ರಾಜ್ಯವು 310 ವರ್ಷಗಳ ಕಾಲ ನಡೆದು ಅಂತಿಮವಾಗಿ 1565 ರಲ್ಲಿ ತಾಳೀಕೋಟಾ ಯುದ್ಧದ ನಂತರ ತನ್ನ ಗತ ವೈಭವವನ್ನು ಕಳೆದುಕೊಂಡಿತು. ವಿದ್ಯಾರಣ್ಯರು ತಮ್ಮ ಎಲ್ಲಾ ವಿದ್ಯೆಯನ್ನೂ ಧಾರೆ ಎರೆದು ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 3600 ವರ್ಷಗಳ ಕಾಲ ಸಾಮ್ರಾಜ್ಯ ಇರಬೇಕೆಂದು ಯೋಜಿಸಿದ್ದರೂ, ವಿಧಿಯಾಟದ ಮುಂದೆ ಅವರ ಯೋಜನೆಗಳು ತಲೆಕೆಳಗಾಗುವ ಮುಖಾಂತರ ಅಡಿಪಾಯದ ನಿಗಧಿತ ಸಮಯಕ್ಕಿಂತಲೂ ಮುಂಚೆಯೇ ನಡೆದು ಹೋಗಿ ಅವರ ಇಚ್ಚೆ ಪೂರ್ಣಗೊಳ್ಳದಾಯಿತು. ಇದರಿಂದ ತಿಳಿದು ಬರುವ ಸತ್ಯವೇನೆಂದರೆ, ಯಾರೇ ಆಗಿರಲಿ ಮತ್ತು ಅವರು ಎಷ್ಟೇ ದೊಡ್ಡವರಗಿದ್ದರೂ, ವಿಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವದಲ್ಲಿ ಶಾಂತಿಧೂತರೆಂದು ತಮ್ಮನ್ನು ತಾವು ಕರೆದುಕೊಳ್ಳುವ ಮುಸಲ್ಮಾನರ ಧಾಳಿಯಿಂದಾಗಿ ವಿಜಯನಗರ ಮತ್ತು ಹಂಪಿ ಈಗ ಹಾಳಾಗಿ ಹೋಗಿದೆ. ಇಡೀ ನಗರದಲ್ಲಿನ, ಸ್ಮಾರಕಗಳು, ದೇವಾಲಯಗಳು ಮತ್ತು ಶಿಲ್ಪಗಳನ್ನು ಹಾಳು ಮಾಡಿರುವುದನ್ನು ನೋಡಿದರೆ ರಕ್ತ ಕುದಿಯುತ್ತದೆ. ತಮ್ಮ ಸಾಮ್ರಾಜ್ಯದ ವಿಸ್ತಾರ ಮತ್ತು ಹಿಂದೂಗಳ ನಂಬಿಕೆ ಮತ್ತು ಅದರ ಪರಂಪರೆಯನ್ನು ನಾಶಪಡಿಸುವುದನ್ನೇ ಏಕೈಕ ಗುರಿಯಾಗಿಟ್ಟು ಕೊಂಡಿದ್ದ ಮತಾಂಧ ಮುಸ್ಲಿಂ ಆಕ್ರಮಣಕಾರರ ಪ್ರತೀಕಾರಕ್ಕೆ ಸ್ಪಷ್ಟ ಪುರಾವೆಯಾಗಿ ಉಳಿದು ಹೋಗಿದೆ. . ಈ ಭೂಮಿಯಿಂದ ಹಿಂದೂ ಧರ್ಮವನ್ನು ನಾಶಮಾಡಲು ಹೊರಟಿದ್ದ ಮುಸ್ಲಿಂ ಆಕ್ರಮಣಕಾರರ ದಬ್ಬಾಳಿಕೆಯ ವಿರುದ್ಧ ಹೋರಾಡಲು ರಾಜಕುಮಾರರನ್ನು ಒಗ್ಗಟ್ಟಿನಿಂದ ನಿಂತು ವಿದ್ಯಾರಣ್ಯರು ಪ್ರೇರೇಪಿಸಿದೇ ಹೋಗದಿದ್ದರೇ, ಸುಮಾರು 300 ವರ್ಷಗಳ ಕಾಲ ಆ ಆಕ್ರಮಣಕಾರರ ವಿರುದ್ಧ ಹೋರಾಟ ನಡಸದೇ ಹೋಗದಿದ್ದರೆ, ಭಾರತವನ್ನು ದಾರ್-ಉಲ್-ಇಸ್ಲಾಂ (ಇಸ್ಲಾಂ ಧರ್ಮದ ಅನುಯಾಯಿಗಳ ಭೂಮಿ) ಆಗಿ ಪರಿವರ್ತಿಸುವ ಮುಸ್ಲಿಂ ಆಡಳಿತಗಾರರ ಉದ್ದೇಶವು ಎಂದೋ ಸಾಕಾರವಾಗಿತ್ತಿತ್ತು ಗುರು ವಿದ್ಯಾರಣ್ಯರು ಹಕ್ಕ ಬುಕ್ಕರ ನೇತೃತ್ವದಲ್ಲಿ ವಿಜಯನಗರ ಸಾಮ್ರಾಜ್ಯ ಕಟ್ಟದಿದ್ದರೇ, ಇಡೀ ದಕ್ಷಿಣ ಭಾರತ ಹಿಂದೂಗಳನ್ನು ನಿಸ್ಸಂದೇಹವಾಗಿ ಬಲವಂತದಿಂದ ಇಸ್ಲಾಂಗೆ ಮತಾಂತರಗೊಳಿಸಿ ಬಿಡುತ್ತಿದ್ದರಲ್ಲಿ ಅನುಮಾನವೇ ಇರಲಿಲ್ಲ.

ಭಗವಾನ್ ಕೃಷ್ಣನು ಗೀತೆಯಲ್ಲಿ ಹೇಳಿರುವಂತೆ

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ…

ಅಂದರೆ, ಯಾವಾಗ ಧರ್ಮದ ಅವನತಿಯಾಗುವುದೋ, ಅಧರ್ಮದ ಉನ್ನತಿಯಾಗುವುದೋ, ಆಗ ನಾನು ಅವತಾರ ಎತ್ತುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.

12 ಮತ್ತು 13 ನೇ ಶತಮಾನಗಳಲ್ಲಿ, ಆಕ್ರಮಣಕಾರಿ ಮತಾಂಧ ಮುಸ್ಲಿಮರು ಇಡೀ ಭಾರತದಲ್ಲಿ ಹಿಂದೂ ಧರ್ಮದ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಹಾನಿ ಮಾಡುತ್ತಿರುವಾಗ ಮೈದೆಳೆದ ವಿಜಯನಗರ ಸಾಮ್ರಾಜ್ಯವು ಸರ್ವಶಕ್ತನ ಕೊಡುಗೆಯಾಗಿದೇ ಎಂದು ನಂಬಬಹುದು. ಆ ಸಾಮ್ರಾಜ್ಯದ ಪ್ರತಿಯೊಬ್ಬ ರಾಜರೂ ಅದ್ಭುತವಾಗಿ ಆಡಳಿತ ನಡೆಸುತ್ತಾ ಹಿಂದೂ ಧರ್ಮವನ್ನು ಎತ್ತಿ ಹಿಡಿದಿದ್ದಲ್ಲದೇ, ಮುಸ್ಲಿಮರ ದಾಳಿಯ ವಿರುದ್ಧ ಸೆಟೆದೆದ್ದು ನಿಂತ ನಿಜವಾದ ಕ್ಷಾತ್ರ ತೇಜದವರು. ಭಾರತದ ಇತಿಹಾಸದಲ್ಲಿ ವಿಜಯನಗರದ ಉದಯಕ್ಕೆ ಪ್ರಮುಖ ಪಾತ್ರ ವಹಿಸಿದ ಗುರು ವಿದ್ಯಾರಣ್ಯರು ದೇವತಾ ಮನುಷ್ಯ ಎಂದರೆ ಅತಿಶಯೋಕ್ತಿಯೇನಲ್ಲ.

ಪ್ರಸ್ತುತ ಯುವ ಜನಾಂಗ ಪಾಶ್ವಾತ್ಯ ಅಂಧಾನುಕರಣಕ್ಕೆ ಮಾರು ಹೋಗಿ, ಇಂತಹ ಇತಿಹಾಸವನ್ನು ಅರಿಯದೇ, ಹಣ ಸಂಪಾದಿಸುವುದೇ ಪರಮ ಗುರಿಯಾಗಿಸಿ ಕೊಂಡು ಅಮೇರಿಕನ್ ಡಾಲರ್‌ಗಳ ಹಿಂದೆ ಬಿದ್ದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇನ್ನು ಕೆಲ ಪಟ್ಟಭದ್ರ ಇತಿಹಾಸಕಾರು ಯಾರನ್ನೋ ಓಲೈಸುವುದಕ್ಕಾಗಿಯೋ ಇಲ್ಲವೇ ಸರ್ಕಾರೀ ಪ್ರಶಸ್ತಿಗಳಿಗೆ ಭಾಜನರಾಗುವುದಕ್ಕಾಗಿ, ವಿಜಯನಗರ ಆಡಳಿತಗಾರರು ಕೇವಲ ಕೊಲೆಗಳ ರಾಜಕೀಯವನ್ನು ಮಾತ್ರ ಮಾಡಿದ್ದಾರೆ ಅವರ್ಯಾರೂ ಹಿಂದೂ ಧರ್ಮದ ರಕ್ಷಣೆಗಾಗಿ ಏನನ್ನೂ ಮಾಡಲಿಲ್ಲ ಎಂದು ಸುಳ್ಳು ಸುಳ್ಳು ಇತಿಹಾಸವನ್ನು ಬರೆಯುವರಿಗೆ ಆ ಭಗವಂತನೇ ಖಂಡಿತವಾಗಿಯೂ ಬುದ್ದಿ ಕಲಿಸಿಯೇ ತೀರುತ್ತಾನೆ.

ಇತಿಹಾಸ ಮರುಕಳಿಸುತ್ತದೆ ಎನ್ನುವಂತೆ ಅಂತಹ ಭವ್ಯ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸುವ ಮೂಲಕ ಇಡೀ ವಿಶ್ವದಲ್ಲಿ ಸನಾತನ ಧರ್ಮ ಮತ್ತೊಮ್ಮೆ ಅರಳಿ, ಭಾರತ ಮತ್ತೊಮ್ಮೆ ಅತೀ ಶೀಘ್ರದಲ್ಲಿ ವಿಶ್ವಗುರುವಾಗಲಿ ಎನ್ನುವುದೇ ನಮ್ಮ ನಿಮ್ಮೆಲ್ಲರ ಆಶಯವಾಗಿದೆ ಅಲ್ವೇ….

ಹನುಮಂತಪ್ಪ ಸೋಮಲಾಪುರ

Discover more from Valmiki Mithra

Subscribe now to keep reading and get access to the full archive.

Continue reading