ಮಧುಗಿರಿ ತಾಲ್ಲೂಕು ಕಸಬಾ ಹೋಬಳಿಯ ಬಂದ್ರೇಹಳ್ಳಿ ತೇರಿನ ಬೀದಿಯ ಸಮೀಪ ಬೆಳ್ಳೂರು ಕಟ್ಟೆಯ ಬಳಿ
ಮಧುಗಿರಿ ತಾಲ್ಲೂಕಿನ ಕಸಬಾ,ಐ.ಡಿ.ಹಳ್ಳಿ,ಮಿಡಿಗೇಶಿ ವ್ಯಾಪ್ತಿಯ ಸುಮಾರು 1500 ರಿಂದ 2000 ಎಕರೆ ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಅರಣ್ಯ ಇಲಾಖೆ ಬಲವಂತವಾಗಿ ಕಸಿದುಕೊಳ್ಳುವ ಸರ್ಕಾರದ ಹುನ್ನಾರದ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್ ರಾಜಣ್ಣನವರು ರೈತರೊಂದಿಗೆ ಸೇರಿ ಉಧ್ಘಾಟಿಸಿದರು
ಈ ಮೂರು ಹೋಬಳಿಗಳ ಸುಮಾರು 30,ರಿಂದ 40 ವರ್ಷಗಳಿಂದಲೂ ಸಹ ರೈತರು ಈ ಜಮೀನುಗಳಲ್ಲಿ ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿದ್ದಾರೆ ಪ್ರತಿಯಬ್ಬ ರೈತನ ಹೆಸರಿನಲ್ಲೂ ಸಾಗುವಳಿ ಚೀಟಿ,ಕಂದಾಯ ಪಾವತಿ ರಷೀದಿ, ಪಹಣಿ ಇರುತ್ತದೆ ಆದರೆ ಇಂದು ಅರಣ್ಯ ಇಲಾಖೆಯು ಈ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದ್ದು ಈಗಾಗಲೇ ಈ ಜಮೀನುಗಳಲ್ಲಿ ಅಲ್ಲಲ್ಲಿ ಟ್ರಂಚ್ ಗಳನ್ನು ಹೊಡೆಯುತ್ತಿದ್ದರು ರೈತರಿಗೆ ಆಗುತ್ತಿರುವ ಈ ಅನ್ಯಾಯವನ್ನು ವಿರೋಧಿಸಿ ಸರ್ಕಾರದ ಈ ಹುನ್ನಾರವನ್ನು ತಪ್ಪಿಸಲು ಹಮ್ಮಿಕೊಂಡಿದ್ದ ಈ ಪ್ರತಿಭಟನೆ ಇದಾಗಿದ್ದು
ಈ ಪ್ರತಿಭಟನಾ ಸಭೆಯಲ್ಲಿ ರೈತರು ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಿದ್ದು , ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಕಾಂಗ್ರೆಸ್ ಬ್ಲಾಕ್ ಹಾಗು ಗ್ರಾಮಾಂತರ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ,ರಾಜಗೋ ಪಾಲ್,ಮಾಜಿ ಜಿ.ಪಂ ಸದಸ್ಯ ಜಿ.ಜೆ.ರಾಜಣ್ಣ, ಮಾಜಿ.ಪುರಸಭಾ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಳ್ಳಿ ರಾಜಕುಮಾರ್ ಸ.ಮ.ಮ.ಮಾಜಿ ಅಧ್ಯಕ್ಷ ಎನ್.ಗಂಗಣ್ಣ,ಮುಖಂಡರಾದ ಡಿ.ಹೆಚ್.ನಾಗರಾಜು ಎಂ.ಬಿ.ಮರಿಯಣ್ಣ, ಫಾಸಿಲ್ ಖಾನ್,ಕಾಂತರಾಜು,ಜೆ.ಡಿ.ವೆಂಕಟೇಶ್, ಗ್ರಾ.ಪಂ ಅಧ್ಯಕ್ಷರಾದ ಸಾವಿತ್ರಮ್ಮ ನಾಗರಾಜು, ಭವ್ಯ ಕೇಶವಮೂರ್ತಿ, ಈ ಭಾಗದ ರೈತರು ಹಲವಾರು ಮುಖಂಡರುಗಳು ಮತ್ತಿತರರು ಹಾಜರಿದ್ದರು
ಪ್ರತಿಭಟನಾ ಸಭೆಯಲ್ಲಿ ರೈತರು ತಮ್ಮ ಪಹಣಿ,ಕಂದಾಯ ರಷೀದಿ ಸಾಗುವಳಿ ಚೀಟಿಗಳನ್ನು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ *ಶ್ರೀ ಕೆ.ಎನ್.ರಾಜಣ್ಣನವರ ಸಮ್ಮುಖದಲ್ಲಿ ತೋರಿಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು
ವರದಿ: ನಾಗರಾಜು, ಮದುಗಿರಿ