ಕುದರಿ ಸಾಲವಾಡಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ರಾಜಿನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 14-03-2022 ಚುನಾವಣೆ ನಡೆಯಿತು. 21 ಗ್ರಾಮ ಪಂಚಾಯತ ಸದಸ್ಯರ ಬಲ ಹೊಂದಿದ್ದು ಶ್ರೀ ರಾಜುಗೌಡ ಪಾಟೀಲ ಅವರ ಪೆನಲ್ ನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಗುಳಬಾಳ ಗ್ರಾಮದ ಮಕಬುಲ್ ಆಲ್ದಾಳ ನಾಮಪತ್ರ ಸಲ್ಲಿಸಿದರು. ಅವರ ವಿರುದ್ದ ಯಾವ ಅಭ್ಯರ್ಥಿಯು ನಾಮಪತ್ರ ಸಲ್ಲಿಸದ ಕಾರಣ ಮಕಬುಲ್ ಬಾಗವಾನ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾರತಿ ಚಲವಯ್ಯ ಹಾಗೂ ಸಹಾಯಕ ಚುನಾವಣಾಧಿಕಾರಿ ಸಿ.ಸಿ ಪಾಟೀಲ ಘೋಷಿಸಿದರು. ಗುರನಗೌಡ ಪಾಟೀಲ ಸಂಗನಗೌಡ ಪಾಟೀಲ ಅನೀಲಗೌಡ ಪಾಟೀಲ ಬಸಣ್ಣ ಬಾಗೇವಾಡಿ ಗ್ರಾಮ ಪಂಚಾಯತ ಸದಸ್ಯರು ಕಾರ್ಯಕರ್ತರು ಇದ್ದರು.