ಜಗಳೂರು ಪಟ್ಟಣದ ಶಾಸಕರಾದ ಎಸ್ ವಿ ರಾಮಚಂದ್ರಪ್ಪನವರ ಕಚೇರಿಯಲ್ಲಿ ರೈತ ಮೋರ್ಚಾ ಸಂಘಟನಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಲೋಕಿಕೆರೆ ನಾಗರಾಜು ಅವರು ರೈತರು ಹೆಚ್ಚು ಸಂಘಟಿತರಾಗಬೇಕು ಮತ್ತು ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಸಂಘಟನೆಯ ಪದಾಧಿಕಾರಿಗಳು ಕೆಲಸ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷರಾದ ಬೇವಿನಹಳ್ಳಿ ಕಾಂಚನ ಗೌಡ್ರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜಣ್ಣ, ಪಣಿಯಾಪುರ ಲಿಂಗರಾಜು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜೇಶ್, ಸಿದ್ದೇಶ್ , ಕಾರ್ಯದರ್ಶಿಗಳಾದ ರಾಜು ನಾಯಕ , ಎಂ. ಕೆ ಮಹದೇವಪ್ಪ ದೊಣ್ಣೆಹಳ್ಳಿ ಸಿದ್ದನಗೌಡ , ಅರಸೀಕೆರೆ ಚಂದ್ರಪ್ಪ , ರಾಮಘಟ್ಟ ಕುಮಾರ್ , ಓಬಳೇಶ್ , ಹಲವು ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು