• ಕೃಷ್ಣ ಕಾಡಾದ 1.69 ಕೋ. ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ
• ಅನ್ವರ ಗ್ರಾಮದಿಂದ ನಮಸನವರದೊಡ್ಡಿವರೆಗೆ ಬಿಟಿ ರಸ್ತೆ ಅಭಿವೃದ್ಧಿ
ದೇವದುರ್ಗ ತಾಲೂಕಿನ ಅನ್ವರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಅವರು ಚಾಲನೆ ನೀಡಿದರು.
ಅನ್ವರ ಗ್ರಾಮದ ಗಲಗ್ ಮುಖ್ಯರಸ್ತೆಯಿಂದ ನಮಸನವರದೊಡ್ಡಿವರೆಗೆ ಬಿಟಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಕೃಷ್ಣ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ 2021-22ನೇ ಸಾಲಿನ 1.69 ಕೋ. ರೂ. ಅನುದಾನದಲ್ಲಿ ರಸ್ತೆ ಕಾಮಗಾರಿ ಯೋಜನೆ ರೂಪಿಸಲಾಗಿದೆ.
ವರದಿ: ಶಿವಗೇನಿ, ರಾಯಚೂರು