ವರದಿ ಬರಲು ತಿಂಗಳುಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇಕೆ ಗೊತ್ತಾ..?

ಧಾರವಾಡ-ಬೆಳಗಾವಿ ರೈಲ್ವೆ ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸಲಾಗುತ್ತದೆ, ಜಯದೇವ ಹೃದ್ರೋಗ ಸಂಸ್ಥೆಯನ್ನು ಹುಬ್ಬಳ್ಳಿಗೆ ತಂದಿದ್ದೇವೆ. ಇದು ಈ ಭಾಗದ ಜನರಿಗೆ ಉತ್ತಮ ಸೌಲಭ್ಯ ನೀಡಲಿದೆ. ಯುವಕರಿಗೆ ಉದ್ಯೋಗಾವಕಾಶ ನೀಡಿಕೆಗಾಗಿ ಎಫ್ ಎಮ್ಸಿ ಕ್ಲಸ್ಟರ್ ಕೂಡ ಬೇಗನೇ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಪರಾಧ ಶೋಧನೆಯಲ್ಲಿ ಎಫ್ಎಸ್ಎಲ್ ಮಹತ್ವದ ಪಾತ್ರವಹಿಸುತ್ತದೆ. ನ್ಯಾಯಾಲಯಗಳಲ್ಲಿ ಮಾನ್ಯತೆ ಬೇಕಾದರೆ ಎಫ್ಎಸ್ಎಲ್ ವರದಿ ಬೇಕೆ ಬೇಕು. ಇದುವರೆಗೆ ಈ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಇತ್ತು, ವರದಿ ಬರಲು ತಿಂಗಳುಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು ಹೀಗಾಗಿ ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿರುವ ಪ್ರಾದೇಶಿಕ ಎಫ್ಎಸ್ಎಲ್ ಕೇಂದ್ರಹೆಚ್ಚು ಅನುಕೂಲಕರವಾಗಲಿದೆ ಎಂದು ಅವರು ಹೇಳಿದರು.

ಜಾರ್ಖಂಡ್ ನ ಒಂದು ಹಳ್ಳಿ ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿದ್ದು ಅಲ್ಲಿನವರು ಕ್ಷಣ ಮಾತ್ರದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ, ಎಂದ ಅವರು ನಮ್ಮ ಪೊಲೀಸರು ಅತೀಹೆಚ್ಚು ಅಪರಾಧಗಳನ್ನು ಶೋಸುವ ಕೆಲಸಮಾಡುತ್ತಿದ್ದು ಅದಕ್ಕಾಗಿ ಅಭಿನಂದಿಸುವುದಾಗಿ ಹೇಳಿದರು.

Discover more from Valmiki Mithra

Subscribe now to keep reading and get access to the full archive.

Continue reading