ಮಂಗಳೂರು: ಬೆಂದೋರ್‌ವೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಬುಧವಾರ ಸಿಸಿಬಿ ಪೊಲೀಸರು ಭೇದಿಸಿದ್ದು, ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿದೆ.
ಬಂಧಿತರು ವಿಟ್ಲ ಪಡ್ನೂರಿನ ಕೆಪಿ ಹಮೀದ್ (54), ಆಕಾಶಭವನದ ಅನುಪಮಾ ಶೆಟ್ಟಿ (46), ಸುಬ್ರಹ್ಮಣ್ಯ ಕುಲ್ಕುಂದದ ನಿಶ್ಮಿತಾ (23) ಎಂದು ತಿಳಿದು ಬಂದಿದೆ.
ಪಿಇಇಬಿಐ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದ್ದು, ಆರೋಪಿಗಳಿಂದ ಕಾರು, ಆರು ಮೊಬೈಲ್ ಫೋನ್ ಗಳು ಹಾಗೂ 80,000 ರೂ.ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.