ಅಥಣಿ: ತಾಲೂಕಿನಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು.
ಶಿವಾಜಿ ಸರ್ಕಲ್ ಇಂದ ಅಂಬೇಡ್ಕರ್ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ಮಾಡಿ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತನಾದ ಹರ್ಷ ಎಂಬಾತನನ್ನು ಹತ್ಯೆಗೈದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಬೇಡಿಕೆಯೊಂದಿಗೆ ತಹಶೀಲ್ದಾರರಿಗೆ ಮನವಿ ಮಾಡಲಾಯಿತು.
ಹಾಗೂ ಹರ್ಷನ ಕುಟುಂಬಕ್ಕೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳಿಂದ ಒಂದು ಲಕ್ಷ (100000)ರೂ ಗಳನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ಅರವಿಂದ್ ದೇಶಪಾಂಡೆ, ಮಹಾವೀರ ಹಳ್ಳೂರ, ರಾಜಕುಮಾರ ಜಂಬಗಿ, ವೀರೇಷ ಹಡಪದ, ಅನೀಲ ಮೋರೆ, ಸಂತೋಷ ನಾಯಕ, ಪ್ರದೀಪ ಜಾಧವ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.