ಭಾರತರತ್ನ ಲತಾಮಂಗೇಶ್ಕರ್ ರವರಿಗೆ ಮೌನಾಚರಣೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ

ಮಧುಗಿರಿ: ಇಂದು ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗು ಮಾನ್ಯ ಮಧುಗಿರಿ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರ‌ ಮಾರ್ಗದರ್ಶನದಲ್ಲಿ ಮಧುಗಿರಿ ಎಂ.ಎನ್.ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಸದಸ್ಯತ್ವ ನೊಂದಣಿಯ ಕಾರ್ಯಗಾರವನ್ನು ಇತ್ತಿಚೆಗೆ ನಮ್ಮನ್ನಗಲಿದ ಪ್ರಸಿದ್ದ ಗಾಯಕಿ ಭಾರತದ ಗಾನ ಕೋಗಿಲೆ ಭಾರತರತ್ನ ಲತಾಮಂಗೇಶ್ಕರ್ ರವರಿಗೆ ಮೌನಾಚರಣೆ ಸಲ್ಲಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರರವರು ಕೆ.ಪಿ.ಸಿ.ಸಿ‌ ಡಿಜಿಟಲ್‌ ಸದಸ್ಯತ್ವ ನೊಂದಣಿಯ ಉಸ್ತುವಾರಿಗಳಾದ ಶ್ರೀ ಶ್ರೀನಾಥ್ ಹಾಗೂ ಅನಿಲ್ ರವರು ಪಾವಗಡ ವೆಂಕಟೇಶ್ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಮಧುಗಿರಿ ನಗರ ಹಾಗು ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರು ಪುರಸಭಾ ಹಾಲಿ ,ಮಾಜಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಡಿಜಿಟಲ್ ಸದಸ್ಯತ್ವದ ಎನ್ ರೋಲರ್ ಗಳು ಸಾಮಾಜಿಕ‌ ಜಾಲತಾಣದ ಸದಸ್ಯರು ಹಾಜರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading