ವಿದ್ಯಾರ್ಥಿಗಳ ನಡುವೆ ಕೋಮು ಸಂಘರ್ಷ ಹುಟ್ಟು ಹಾಕುತ್ತಿರುವವರು ಯಾರೇ ಆದರೂ ಪತ್ತೆ ಹಚ್ಚಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ತಿಂಗಳ ಹಿಂದೆಯೇ ಹುಟ್ಟಿಕೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಹೊತ್ತಿ ಉರಿಯತೊಡಗಿದ ನಂತರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದರ ಹಿಂದೆ ಎಸ್‍ಡಿಪಿಐ, ಸಿಎಫ್‍ಐ ಇರಬಹುದೆಂಬ ಶಂಕೆ ವ್ಯಕ್ತಪಡಿದಿದ್ದರು. ಇಲ್ಲಿಯವರೆಗೂ ಗೃಹಸಚಿವರು, ಪೊಲೀಸರು, ಗುಪ್ತದಳದವರು ಏನು ಮಾಡ್ತಿದ್ದರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದು, ಮೊದಲು ಎಲ್ಲರೂ ಕೂಡಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು ಎಂದಿದ್ದಾರೆ.
ಹಿಜಾಬ್ ಧಾರಣೆಯ ಸರಿ-ತಪ್ಪು ಬಗ್ಗೆ ನ್ಯಾಯಾಲಯ ನಿರ್ಧರಿಸಲಿ. ಅಲ್ಲಿಯವರೆಗೆ ಕಾಯೋಣ. ಆದರೆ, ವಿದ್ಯಾರ್ಥಿನಿಗಳ ಮೇಲೆ ಹಲ್ಲೆಗೆ ಪ್ರಯತ್ನ, ಶಾಲೆಗೆ ಕಲ್ಲೆಸೆತ, ರಾಷ್ಟ್ರಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸುವುದು ಸರಿಯಲ್ಲ.