ಬೆಂಗಳೂರು : 26 ವರ್ಷಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು ಕಂಡಿರುವ ಕಿಚ್ಚ ಗೆದ್ದಾಗ ಹಿಗ್ಗಲಿಲ್ಲ, ಬಿದ್ದಾಗ ಕುಗ್ಗಲಿಲ್ಲ. ಅದಕ್ಕೆ ಸಾಕ್ಷಿ ಎಂಬತೆ ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ್ದವು, ಇದಕ್ಕೆ ಜಗ್ಗದ ಕಿಚ್ಚ ನಟನೆಯಿಂದ ನಿರ್ದೇಶಕ, ನಿರ್ಮಾಪಕನಾಗಿ ‘ಮೈ ಆಟೋ ಗ್ರಾಫ್’ ಚಿತ್ರ ಮಾಡಿ ಮತ್ತೆ ಗೆಲುವಿನ ಕುದುರೆ ಏರಿ ಚಿತ್ರರಂಗದಲ್ಲಿ ಸವಾರಿ ಮುಂದುವರೆಸಿದರು.
ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ದರ್ಬಾರ್ ನಡೆಸುತ್ತಿದ್ದಾರೆ.
ಇನ್ನು ಕಿಚ್ಚ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶ್ವದ ಅತೀ ಎತ್ತರದ ಕಟ್ಟಡವಾದ ದುಬೈನ ಬುರ್ಜು ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಟ್ರೀಸರ್ ಲಾಂಚ್ ಮಾಡಿ ರೆಕಾರ್ಡ್ ಮಾಡಿದ್ದರು. ಆ ನೆನಪು ಇನ್ನು ಕಿಚ್ಚನ ಅಭಿಮಾನಿಗಳಲ್ಲಿ ಮಾಸುವ ಮುನ್ನವೆ ಈಗ ಕಿಚ್ಚ ಚಿತ್ರರಂಗದಲ್ಲಿ 26ವರ್ಷಗಳ ಪೂರೈಸಿದ್ದಾರೆ.ಇನ್ನು ಈ ಸಂಭ್ರಮದಲ್ಲಿ ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಏನಾದರೂ ಸರ್ಪ್ರೈಸ್ ಗಿಫ್ಟ್ ಸಿಗುತ್ತ ಕಾದು ನೋಡಬೇಕು.
ಇನ್ನು ಕಿಚ್ಚ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶ್ವದ ಅತೀ ಎತ್ತರದ ಕಟ್ಟಡವಾದ ದುಬೈನ ಬುರ್ಜು ಖಲೀಫಾದ ಮೇಲೆ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಟ್ರೀಸರ್ ಲಾಂಚ್ ಮಾಡಿ ರೆಕಾರ್ಡ್ ಮಾಡಿದ್ದರು. ಆ ನೆನಪು ಇನ್ನು ಕಿಚ್ಚನ ಅಭಿಮಾನಿಗಳಲ್ಲಿ ಮಾಸುವ ಮುನ್ನವೆ ಈಗ ಕಿಚ್ಚ ಚಿತ್ರರಂಗದಲ್ಲಿ 26ವರ್ಷಗಳ ಪೂರೈಸಿದ್ದಾರೆ. ಇನ್ನು ಈ ಸಂಭ್ರಮದಲ್ಲಿ ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಏನಾದರೂ ಸರ್ಪ್ರೈಸ್ ಗಿಫ್ಟ್ ಸಿಗುತ್ತ ಕಾದು ನೋಡಬೇಕು.