ಮಸ್ಕಿ: ತಾಲೂಕಿನ ಮ್ಯಾದರಾಳ ಗೊಲ್ಲರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಕಾರಿಗಳ ಕಛೇರಿ ಲಿಂಗಸ್ಗೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿ ನೆರೆದಿರುವ ಎಲ್ಲಾ ಗಣ್ಯರಿಗೆ ಶಾಲು ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ನಂತರ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂವಿನ ಮಾಲೆ ಹಾಕಿ ಇಡೀ ವೇದಿಕೆಯು ಹಾಗೂ ಸಾರ್ವಜನಿಕರೂ ಗೌರವ ಸಲ್ಲಿಸಿದರು.
ವೇದಿಕೆಯ ಗಣ್ಯರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಕುರಿತುಮೊದಲಿಗೆ ಮಾತನಾಡಿದ ಮೊಹಮ್ಮದ್ ಶಫಿ ನಿಲಯ ಮೇಲ್ವಿಚಾರಕರು ಮುದಗಲ್ ಇವರು ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಅಲೆಮಾರಿ ಸಮುದಾಯದವರಿಗೆ ಮೊದಲ ಆದ್ಯತೆ ನೀಡಲಾಗುವುದು. ವಸತಿ ಯೋಜನೆ ನಿರ್ವಹಣೆ ,ವಿದ್ಯಾರ್ಥಿ ವೇತನ, ಗಂಗಾ ಕಲ್ಯಾಣಯೋಜನೆ,2500 ಮನೆಗಳನ್ನು ಮಸ್ಕಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಂಜೂರು ಮಾಡಲಾಗಿದೆ. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಸ್ಕಿಯಲ್ಲಿ ಇಲ್ಲ , ಇದೇ ರೀತಿಯ ಐದು ಹತ್ತು ಹಲವು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅರಿವು ಮೂಡಿಸುವ ಸಲಹೆ ನೀಡಿದರು.
ಸಮುದಾಯದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲಾ ಮೂಲ ಸೌಕರ್ಯಗಗಳು ಮುಟ್ಟುವಂತೆ ಸರಕಾರ ಹಲವು ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ. ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ, ಕೂಲಿ ಮಾಡುವ ವ್ಯಕ್ತಿ ಕೂಲಿ ಮಾಡಬೇಕು ಅನ್ನೋದು ಇಲ್ಲಾ, ಕಟ್ಟಿಗೆ ಒಡೆಯುವ ವ್ಯಕ್ತಿ ಕಟ್ಟಿಗೆ ಹೊಡೆಯಬೇಕು ಅನ್ನೋದು ಇಲ್ಲಾ, ಈ ವ್ಯವಸ್ಥೆ ಬದಲಾಗಬೇಕು ಎಂದು ನೆರೆದ ಜನತೆಗೆ ರೂಪಾ ಪ್ರಥಮ ದರ್ಜೆ ಸಹಾಯಕರು ತಂದೆ ತಾಯಿ ಮತ್ತು ಮಗುವಿನ ಬಗೆಗಿನ ಮಾದರಿಯ ಕಥೆ ಹೇಳಿ ಶಿಕ್ಷಣದ ಬಗ್ಗೆ ಅರ್ಥಗರ್ಭಿತ ಸಲಹೆ ನೀಡಿದರು.
ಶೈಕ್ಷಣಿಕ ಸೌಲಭ್ಯ ಗಳಾದ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ 2000 ರೂಪಾಯಿ, ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೂ ಸಹಾಯ ಧನ, ಹಾಗೆಯೇ ಅಲೆಮಾರಿ ಸಮುದಾಯದ ನಗರಗಳಲ್ಲಿ ಸರಿಯಾದ ರಸ್ತೆ ಇಲ್ಲದಿದ್ದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೆ ಒಂದು ಪತ್ರ ನೀಡಿದರೆ ಸಿಸಿ ರಸ್ತೆ ನಿರ್ಮಾಣ ಮಾಡಿಸಿ ಕೊಡಲಾಗುವುದು ಎಂದು ದಂಡಪ್ಪ ನಿಲಯ ಮೇಲ್ವಿಚಾರಕರು ಯೋಜನಾ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ದಂಡಪ್ಪ ನಿಲಯ ಮೇಲ್ವಿಚಾರಕರು ನಿರೂಪಿಸಿದರೆ ಉದಯಕುಮಾರ್ ನಿಲಯ ಮೇಲ್ವಿಚಾರಕರು ವಂದಿಸಿದರು.ಇದೇ ಸಂದರ್ಭದಲ್ಲಿ ಮರಿಯಮ್ಮ ಬಿಸಿಎಂ ತಾಲೂಕ ವಿಸ್ತರಣಾಧಿಕಾರಿ ಗಳು ಲಿಂಗಸ್ಗೂರು, ರೂಪಾ ಪ್ರಥಮ ದರ್ಜೆ ಸಹಾಯಕರು, ಮೇಲ್ವಿಚಾರಕರುಗಳಾದ ಉದಯಕುಮಾರ, ಭೀಮಣ್ಣ, ಪುಷ್ಪಾವತಿ, ರಾಮಲಿಂಗಪ್ಪ, ಮಲ್ಲರೆಡ್ಡೆಪ್ಪ ಎಪಿಎಂಸಿ ಅಧ್ಯಕ್ಷರು ಲಿಂಗಸ್ಗೂರು, ರಾಜಪ್ಪ ಸಾಹಿತಿ ಗಬ್ಬೂರು, ದುರುಗಪ್ಪ ಯಾದವ್ ತಾಲೂಕ ಅಧ್ಯಕ್ಷರು ಮಸ್ಕಿ, ಯಂಕೋಬ ಯಾದವ್ ಗ್ರಾ.ಪಂ ಸದಸ್ಯರು ಗೊಲ್ಲರಹಟ್ಟಿ, ಲಕ್ಷ್ಮಣ್ ಯಾದವ್ ಮುಖಂಡರು,ಚನ್ನಪ್ಪ ಸಿಬ್ಬಂದಿ ಬಿಸಿಎಂ ಇಲಾಖೆ ಸೇರಿದಂತೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರು ಸೇರಿದಂತೆ ಗ್ರಾಮಸ್ಥರಿದ್ದರು.